ಶಿವಮೊಗ್ಗ: ಕೆಲವು ದಿನಗಳಿಂದ ನನ್ನ ಬಗ್ಗೆ ರಾಜಕೀಯ ಕೇಂದ್ರಿತ ಸುದ್ಧಿಗಳು ಹರಿದಾಡಿವೆ. ಎಲ್ಲರ ನಿರೀಕ್ಷೆಯಂತೆ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೆನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರನ್ನು ಭೇಟಿಯಾಗಿದ್ದೆನೆ. ನಾಳೆ ನಾನು ನನ್ನ ಸ್ನೇಹಿತರ ಜೊತೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೆನೆ ಎಂದು ಪ್ರಕಟಿಸಿದರು.
ಆಗ ಅನಿವಾರ್ಯವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದೆ. ಇದು ನನ್ನ ಕೊನೆಯ ಬಸ್ ಸ್ಟಾಪ್ ಆಗಿದೆ. ಆತಂಕಕ್ಕೆ ಒಳಗಾಗಿರುವ ಕೆಲ ನಾಲ್ಕು ಜನರು ನನಗೆ ವಿರೋಧಿಸುತ್ತಿದ್ದಾರೆ. ಕೆಲವರ ವಿರೋಧ ಇದ್ದರೂ ಶೇ. ೯೯ ರಷ್ಟು ಜನರು ನನ್ನನ್ನು ಒಪ್ಪಿದ್ದಾರೆ. ನನಗೆ ವಿರೋಧಿಸುವವರಿಗೆ ನಾನು ಯಾವುದೇ ಅಡ್ಡಿಯಾಗಲ್ಲ. ನಿರಾಶೆಯಾದವರು ಯಾಕೋ ಆತಂಕಕ್ಕೊಳಗಾಗಿದ್ದಾರೆ. ನಾನು ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದೆನೆ. ವಿರೋಧ ಮಾಡುವವರಿಗೆ ನಾನು ಅಡ್ಡಿಯಾಗಲ್ಲ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದರು.