Saturday, April 19, 2025
Google search engine

Homeಸಿನಿಮಾ೫೦೦ ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಗದರ್ -೨

೫೦೦ ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಗದರ್ -೨

ಬಾಲಿವುಡ್‌ನ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚೈತನ್ಯ ಮೂಡಿದೆ. ಅದಕ್ಕೆ ಕಾರಣ ಗದರ್-೨ ಸಿನಿಮಾ. ಆಗಸ್ಟ್ ೧೧ರಂದು ಬಿಡುಗಡೆ ಆದ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾದಿಂದ ನಟ ಸನ್ನಿ ಡಿಯೋಲ್ ಅವರು ಭರ್ಜರಿ ಗೆಲವು ಸಿಕ್ಕಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನಾಗಾಲೋಟ ಮುಂದುವರಿಸಿದೆ. ಬಿಡುಗಡೆಯಾಗಿ ೧೨ ದಿನಗಳು ಕಳೆದಿದ್ದರೂ ಕೂಡ ಸಿನಿಮಾದ ಕಲೆಕ್ಷನ್ ಚೆನ್ನಾಗಿಯೇ ಆಗುತ್ತಿದೆ. ಹೊಸ ಸಿನಿಮಾಗಳ ರಿಲೀಸ್ ನಡುವೆಯೂ ಗದರ್- ೨ ಚಿತ್ರ ಉತ್ತಮವಾಗಿ ಕಮಾಯಿ ಮಾಡಿದೆ. ಸದ್ಯಕ್ಕೆ ಈ ಚಿತ್ರದ ಗಳಿಕೆ ೪೦೦ ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾ ೫೦೦ ಕೋಟಿ ರೂಪಾಯಿ ಗಡಿ ಮುಟ್ಟಲಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಭವಿಷ್ಯ ನುಡಿದಿದ್ದಾರೆ.

ಮೊದಲ ದಿನವೇ ಗದರ್ ೨ ಸಿನಿಮಾ ಬರೋಬ್ಬರಿ ೪೦.೧೦ ಕೋಟಿ ರೂಪಾಯಿ ಮಾಡಿತು. ಆ ನಂತರ ಬಂದ ವೀಕೆಂಡ್ ಮತ್ತು ರಜಾ ದಿನಗಳಲ್ಲಿ ಈ ಚಿತ್ರ ಅತ್ಯುತ್ತಮವಾಗಿ ಪ್ರದರ್ಶನ ಕಂಡಿದೆ. ಬಹುತೇಕ ಎಲ್ಲ ಕಡೆಗಳಲ್ಲೂ ಹೌಸ್‌ಪುಲ್ ಪ್ರದರ್ಶನ ಆಗಿದೆ. ಸನ್ನಿ ಡಿಯೋಲ್ ಅವರ ಅಪ್ಪಟ ಅಭಿಮಾನಿಗಳು ಎರಡು-ಮೂರು ಬಾರಿ ಸಿನಿಮಾ ನೋಡುತ್ತಿದ್ದಾರೆ. ಉತ್ತಮ ಬಾಯಿ ಮಾತಿನ ಪ್ರಚಾರ ಈ ಚಿತ್ರಕ್ಕೆ ಸಿಕ್ಕಿದೆ. ಈ ಎಲ್ಲ ಕಾರಣಗಳಿಂದಾಗಿ ಗದರ್ ೨ ಸಿನಿಮಾದ ಅಬ್ಬರ ಜೋರಾಗಿದೆ.

RELATED ARTICLES
- Advertisment -
Google search engine

Most Popular