ಬಾಗಲಕೋಟೆ: ಇಂದು ಭಾರತ ಐತಿಹಾಸಿಕ ದಿನವಾಗಿದೆ. ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ರಾಯಲ್ ಪ್ಯಾಲೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿಯಜ್ಞ ನಡೆಸಲಾಗಿದೆ.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಮಾಡಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಸರಸ್ವತಿ ದೇವಿಗೆ ಮಹಾಭಿಷೇಕ, ಆರತಿ ಮಾಡಲಾಗಿದೆ.

ಶಾಲೆಗೆ ತೊಳಿರು ತೋರಣ ಕಟ್ಟಿ ಅಲಂಕಾರಗೊಳಿಸಿದ ವಿದ್ಯಾರ್ಥಿಗಳು, ವಿಶೇಷವಾಗಿ ರಂಗೋಲಿಯಲ್ಲಿ ವಿಕ್ರಂ ಲ್ಯಾಂಡರ್ ಚಿತ್ರ ಬಿಡಿಸಿದ್ದಾರೆ.
ಭಾರತೀಯರ ಕನಸು ಸಾಕಾರವಾಗಲಿ ಎಂದು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಯಜ್ಞದಲ್ಲಿ ಬಾಗಿಯಾಗಿದ್ದಾರೆ.
ಭಾರತ ದೇಶದ ಮಹತ್ವದ ಯೋಜನೆ ಹಗಲಿರುಳು ಶ್ರಮಿಸಿದ ಇಸ್ರೋ ಶಾಲಾ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ಶುಭ ಕೋರಿದ್ದಾರೆ.
ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡ್ ಆಗಲಿ ಎಂದು ಭಗವಂತನಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ವಿಕ್ರಂ ಲ್ಯಾಂಡ್ ಆಗುವವರೆಗೂ ವಿಶೇಷವಾಗಿ ಯಜ್ಞ ಪೂಜಾ ಆಯೋಜಿಸಲಾಗಿದೆ.