ಬಳ್ಳಾರಿ: ಜಿಲ್ಲೆಯ ರೈತರು ಸಂಪೂರ್ಣ ಆತಂಕದಲ್ಲಿದ್ದು, ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಿ. ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಹಸ್ತ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಜಿಲ್ಲಾಧ್ಯಕ್ಷ್ಯ ಸಂಗನಕಲ್ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ, ತೊಗರಿ ಮೆಕ್ಕೆಜೋಳ, ಹತ್ತಿ ಮೆಣಸಿನ ಕಾಯಿ ಬೆಳೆಗಳಿಗೆ ಸಮರ್ಪಕ ನೀರು ದೊರಕದೆ ಜಮೀನಿನಲ್ಲೆ ಒಣಗುವ ಸ್ಥಿತಿಗೆ ತಲುಪಿವೆ. ಸರಿಯಾದ ಮಳೆಯು ಬೀಳುತ್ತಿಲ್ಲ. ಕೃಷಿ ಇಲಾಖೆಯು ಯಾವುದೇ ಸಹಾಯಕ್ಕೆ ದಾವಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನು, ಮಾರುಕಟ್ಟೆಯಲ್ಲಿ ನಕಲಿ ಬೀಜ ಗೊಬ್ಬರದ ಹಾವಳಿ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು ಮತ್ತು ರೈತರ ಅಭಿವೃದ್ಧಿಗೆ ನೀಡಲಾಗುತ್ತಿರುವ ನರ್ಸರಿಗಳಿಗೆ 3 ಲಕ್ಷ ಅನುದಾನ ಮಂಜುರಾಗಿದ್ದರು, ಏಜೆಂಟರುಗಳ ಮೂಲಕ ಅವ್ಯೆವಹಾರನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಸಮಸ್ಯೆಗಳಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ, ತಾಲೂಕು ಅಧ್ಯಕ್ಷ್ಯ ಎರ್ರಿಸ್ವಾಮಿ, ಪ್ರ.ಕಾರ್ಯದರ್ಶಿ ಈಶ್ವರಪ್ಪ. ಸದಸ್ಯರಾದ, ಶ್ರೀನಿವಾಸ ನಾಯ್ಕ್, ಕನ್ಯಾ ನಾಯ್ಕ್ ಮತ್ತು ಚಂದ್ರ ನಾಯಕ್, ಮಂಜುನಾಯಕ್ ಉಪಸ್ಥಿತರಿದ್ದರು.