ಮಂಡ್ಯ:ಚಂದ್ರಯಾನ -3 ಯಶಸ್ವಿ ಹಿನ್ನೆಲೆ ಇಸ್ರೋ ಸಾಧನೆಗೆ ಜೊತೆಗೆ ಇಸ್ರೋ ಸಾಧನೆಯ ಭಾಗವಾಗಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆ ಚಿಟ್ಟೆನಹಳ್ಳಿ ಗ್ರಾಮದ ಯುವಕ ಇಂಜಿನಿಯರ್ ರವಿ ಪಿ ಗೌಡ ಅವರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಇದೊಂದು ಇಡೀ ಭಾರತೀಯರ ಹೆಮ್ಮೆ. ಇಸ್ರೋ ಸಾಧನೆ ಅವಿಸ್ಮರಣೀಯ. ಇದು ಭಾರತೀಯರು ಎಂದೂ ಮರೆಯಲಾಗದ ದಿನ. ಚಂದ್ರಯಾನ 3 ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಚಂದ್ರನ ಅಂಗಳ ಸ್ಪರ್ಶಿಸಿದೆ. ಮುಂದಿನ ಸಂಶೋಧನೆಗಳು ಇಡೀ ಜಗತ್ತಿಗೆ ಬೆಳಕು ಚೆಲ್ಲುವಂತಾಗಲಿ. ಈ ಸಾಧನೆಯಲ್ಲಿ ನೂರಾರು ವಿಜ್ಞಾನಿಗಳು ,ತಂತ್ರಜ್ಞರ ದಣಿವರಿಯದ ಶ್ರಮ ಅಡಗಿದೆ. ನಮ್ಮ ಜಿಲ್ಲೆಯ ರವಿ .ಪಿ ಗೌಡ ಅವರು ಹಿರಿಯ ವಿಜ್ಞಾನಿಯಾಗಿ, ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ನಮೆಲ್ಲರಿಗೂ ಅಭಿಮಾನ ತರುವ ವಿಚಾರವಾಗಿದೆ. ಇದರಿಂದಾಗಿ ಇಸ್ರೋ ಚಂದ್ರಯಾನ -3 ತಂಡಕ್ಕೆ ಹಾಗೂ ಸಾಧನೆಯ ಭಾಗವಾಗಿರುವ ರವಿ ಪಿ ಗೌಡ ಅವರಿಗೆ ವಿಶೇಷ ಅಭಿನಂದನೆಯನ್ನುಚೆಲುವರಾಯಸ್ವಾಮಿ ಸಲ್ಲಿಸಿದ್ದಾರೆ.
