ಮಂಡ್ಯ:ಚಂದ್ರಯಾನ -3 ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿ ಬಳಿ ಸಂಭ್ರಮಾಚರಣೆ ಮಾಡಿದರು. ಚಂದ್ರಯಾನ -3 ರ ನೇರ ಪ್ರಸಾರವನ್ನು ವೀಕ್ಷಣೆ ಮಾಡಿ ಯಶಸ್ವಿಯಾಗುತ್ತಿದ್ದಂತೆ ಪಟಾಕಿ ಸಿಡಿಸಿ , ಕೈಯಲ್ಲಿ ಬಾವುಟ ಹಿಡಿದು ಘೋಷಣೆ ಕೂಗಿ ಸಂಭ್ರಮಿಸುವುದರ ಜೊತೆಗೆ ಯಶಸ್ವಿಗೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸಿದರು. ಬಳಿಕ ಸಿಹಿ ಹಂಚಿ ಸಂಭ್ರಮಿಸಿದರು