ಮಂಡ್ಯ: ಹೊಂಡಾ ಆಕ್ಟಿವಾ ಸ್ಕೂಟರ್ ಡಿಕ್ಕಿ ಯಲ್ಲಿ ಹಾವು ಪ್ರತ್ಯಕ್ಷವಾಗಿರುವ ಘಟನೆ ಮಳವಳ್ಳಿ ಪಟ್ಟಣದ ವೈಭವ್ ಹೋಟೆಲ್ ಬಳಿ ನಡೆದಿದ್ದು, ಹಾವು ಕಾಣುತ್ತಿದ್ದಂತೆ ಸ್ಕೂಟರ್ ಬಿಟ್ಟು ಮಹಿಳೆ ಓಡಿಹೋಗಿದ್ದಾಳೆ.
ಮಹಿಳೆಯ ಕಿರುಚಾಟ ನೋಡಿ ಆತಂಕಗೊಂಡ ಸುತ್ತಮುತ್ತಲ ಜನರು ಸ್ಕೂಟರ್ ನಲ್ಲಿ ಹಾವು ಇರುವುದನ್ನು ಕಂಡು ಉರಗರಕ್ಷನಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಘಟನೆಯಿಂದ ಕೆಲಕಾಲ ಹೋಟೆಲ್ ಮುಂಭಾಗ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.