ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಶಾಸಕರು ಧ್ವನಿ ಎತ್ತಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮಂಡ್ಯದ ಮದ್ದೂರು ತಾಲ್ಲೂಕಿನ ಸಾದೋಳಲು ಗ್ರಾಮದಲ್ಲಿರೈತರು ಸಭೆ ನಡೆಸಿದ್ದು, ತತ್ ಕ್ಷಣ ಕಾವೇರಿ ಡ್ಯಾಂನಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಮದ್ದೂರು ಶಾಸಕ ಕದಲೂರು ಉದಯ್ ಗೆ ರೈತರು ತಾಕೀತು ಮಾಡಿದ್ದಾರೆ.
ಮಂಡ್ಯ ಜಿಲ್ಲೆ ನೀರಾವರಿ ಪ್ರದೇಶವಾಗಿದೆ. ಕಾವೇರಿ ನೀರು ಮಂಡ್ಯ ಜಿಲ್ಲೆಗೆ ಬಹಳ ಮುಖ್ಯ. ಹದಿನೈದು ದಿನ ಮಾತ್ರ ನಾಲೆಗೆ ನೀರು ಹರಿಸಲಾಗ್ತಿದೆ. ಭತ್ತ ಒಣಗುತ್ತಿದೆ, ಕೆರೆಗೆ ಒಂದು ಹನಿ ನೀರು ಬಂದಿಲ್ಲ. ಮೂರು ಸಲ ಕಟ್ಟು ಪದ್ದತಿಯಲ್ಲಿ ನಾಲೆಗೆ ನೀರು ಬಿಟ್ಟಿದ್ರು ಮದ್ದೂರು ಬಯಲು ಪ್ರದೇಶಕ್ಕೆ ನೀರು ಬಂದಿಲ್ಲ. ಆದರೆ ಕೆಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗ್ತಿದೆ. ತತಕ್ಷಣವೇ ತಮಿಳುನಾಡಿಗೆ ನೀರು ನಿಲ್ಲಿಸಿ ಎಂದು ರೈತರು ಒತ್ತಾಯಿಸಿದರು.