ಹಿಮಾಚಲಪ್ರದೇಶ: ಕುಲುವಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ, ನೋಡ ನೋಡುತ್ತಿದ್ದಂತೆ ಹತ್ತಾರು ಮನೆಗಳು ನೆಲಕಚ್ಚಿವೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಭೂಕುಸಿತದಿಂದ ಹಲವು ಮನೆಗಳು ಕುಸಿದಿವೆ. ಇಂದು ಬೆಳಗ್ಗೆ ೧೦ ಗಂಟೆಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ ೮ ರಿಂದ ೯ ಕಟ್ಟಡಗಳು ಕುಸಿದುಬಿದ್ದಿವೆ.
ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳಿಂದ ತೆರವು ಮಾಡಿದ್ದರಿಂದ ಈ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ವಾಸಿಸದಿರುವುದು ಖುಷಿಯ ಸಂಗತಿಯಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿ ಈ ಅವಘಡ ಸಂಭವಿಸಿದೆ. ಸಿರಾಜ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿವೆ. ಹೇಗೋ ಜನ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಕಂಗ್ರಾದ ಕೋಟ್ಲಾದಲ್ಲೂ ಪ್ರಕೃತಿ ವಿಕೋಪ ಸೃಷ್ಟಿಸಿದೆ. ಇಲ್ಲಿ ಭೂಕುಸಿತದ ನಂತರ ಅವಶೇಷಗಳು ಮನೆಗಳಿಗೆ ನುಗ್ಗಿದ್ದು, ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.