ಮಂಡ್ಯ: ಮಂಡ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ವಸ್ತುಗಳ ಖರೀದಿ ಜೋರಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದೆ.
ಹಬ್ಬದ ಸಂಭ್ರಮದಲ್ಲಿದ್ದವರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಬ್ಬಕ್ಕೆ ಬೇಕಾದ ಹೂ-ಹಣ್ಣು ತರಕಾರಿಗಳ ದರ ದುಬಾರಿಯಾಗಿದೆ.
ಮಂಡ್ಯ ಮಾರುಕಟ್ಟೆಯಲ್ಲಿ ಹೂ-ಹಣ್ಣು ವ್ಯಾಪಾರ ಜೋರಾಗಿದ್ದು, ವಸ್ತುಗಳ ಬೆಲೆ ದುಬಾರಿಯಾದರು ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.
ವಸ್ತುಗಳ ಬೆಲೆ ಏರಿಕೆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಬೆಲೆ ಏರಿಕೆಯಾದರು ಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಇದೆ. ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ವಸ್ತುಗಳ ಖರೀದಿ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಹಬ್ಬ ಆಚರಣೆ ಮಾಡೋದಕ್ಕೆ ತುಂಬಾ ಕಷ್ಟವಾಗಿದೆ ಎಂದು ಗ್ರಾಹಕರು ಬೇಸರಿಸಿದ್ದಾರೆ.
ಬೆಲೆ ಏರಿಕೆ ಬಿಸಿಯನ್ನ ಜನರ ಮೇಲೆ ಸರ್ಕಾರ ಇಟ್ಟಿದೆ. ಸಾರಿಗೆ ಬಸ್ ನಲ್ಲಿ ಗಂಡಸರು ಹೋಗುವುದಕ್ಕೆ ಆಗ್ತಿಲ್ಲ. ಕಾಂಗ್ರೇಶ್ ಪಕ್ಷ ಉಚಿತ ಯೋಜನೆ ಕೊಟ್ಟು ಚುನಾವಣೆಗಾಗಿ ಗಿಮಿಕ್ ಮಾಡಿದ್ದಾರೆ. ಹೂ-ಹಣ್ಣುಗಳ ಬೆಲೆ ಏರಿಕೆ ಮಾಡಿ ಜನರನ್ನ ಉದ್ದಾರಾ ಮಾಡ್ತಿಲ್ಲ. ಸರ್ಕಾರ ಉಚಿತ ಗ್ಯಾರೆಂಟಿ ಕೊಟ್ಟು ವಸ್ತುಗಳ ಮೇಲೆ ಬೆಲೆ ಹೆಚ್ಚು ಮಾಡಿದ್ದಾರೆ. ಸರ್ಕಾರ ಇರುವವರೆಗೆ ಬೆಲೆ ಏರಿಕೆ ಕಡಿಮೆಯಾಗಲ್ಲ ಎಂದು ವಸ್ತಗಳ ಬೆಲೆ ಏರಿಕೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.