ವಿನಯ್ ದೊಡ್ಡಕೊಪ್ಪಲು
ಹೊಸೂರು: ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ನ ಎರಡು ಬಣ ಮತ್ತು ಕಾಂಗ್ರೆಸ್ ಬೆಂಬಲಿತರ ಬಣದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಅಧಿಕಾರದ ಚುಕ್ಕಾಣಿ ಯಾವ ಬಣಕ್ಕೆ ಎಂಬ ಕೂತುಹಲ ಕೆರಳಿಸಿದೆ
ಜೆಡಿಎಸ್ ನ ಹಳಿಯೂರು ಎಚ್.ಆರ್.ಮಹೇಶ್ ನೇತೃತ್ವದ ಬಣದಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕಮಲಮ್ಮ,ಎಂ.ಎಂ.ರಂಜಿತಾ, ಸಾಮಾನ್ಯ ಕ್ಷೇತ್ರದಿಂದ ಎಚ್.ಜೆ.ಕುಮಾರ, ಎಚ್.ಆರ್.ಕೃಷ್ಣಮೂರ್ತಿ, ಕೆ.ಮಹದೇವ್, ಬಿ.ರಮೇಶ್,ಹುಚ್ಚೇಗೌಡ,ಪ್ರವರ್ಗ ಬಿ ಯಿಂದ ಎಚ್.ಆರ್.ಮಹೇಶ್, ಎವರ್ಗ ದಿಂದ ಸಿ.ಎಂ.ರಾಜೇಗೌಡ, ಪರಿಶಿಷ್ಟ ಪಂಗಡದಿಂದ ಕೆಂಪನಾಯಕ, ಪರಿಶಿಷ್ಟ ಜಾತಿಯಿಂದ ಪಾರ್ಥಯ್ಯ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಎಚ್.ಸಿ.ಅನಿಲ್ ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಇನ್ನೊಂದು ಜೆಡಿಎಸ್ ನ ಹಳಿಯೂರು ಎಚ್.ಎಸ್.ಜಗದೀಶ್ ನೇತೃತ್ವದ ಬಣದಲ್ಲಿ ಸಾಲಗಾರ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ಗೋಪಾಲ, ಎಚ್.ಎಸ್.ಜಗದೀಶ್, ಎಚ್.ಎನ್.ರಮೇಶ್, ವಿವೇಕನಂದ, ಎಚ್.ಆರ್.ಸತೀಶ್ ಚಂದ್ರ, ಪ್ರವರ್ಗ ಬಿ ಯಿಂದ ಜಯರಾಮೇಗೌಡ ,ಹಿಂದೂಳಿದ ವರ್ಗದಿಂದ ಗೌರಮ್ಮ, ಸಾಮಾನ್ಯ ಮಹಿಳಾ ಸ್ಥಾನದಿಂದ ಜ್ಯೋತಿ, ಪರಿಶಿಷ್ಟ ಪಂಗಡದಿಂದ ತಿಮ್ಮನಾಯಕ, ಪರಿಶಿಷ್ಟ ಜಾತಿಯಿಂದ ಸ್ವಾಮಿ ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿ ಎಚ್.ಬಿ ನವೀನ್ ಕಣದಲ್ಲಿ ಇದ್ದಾರೆ.
ಕಾಂಗ್ರೆಸ್ ಬೆಂಬಲಿತರಾಗಿ ಸಾಲಗಾರರ ಕ್ಷೇತ್ರದಿಂದ ಪ್ರವರ್ಗ ಬಿ ಯಿಂದ ಆನಂತ್,ಸಾಮಾನ್ಯ ಮಹಿಳೆಯಿಂದ ಕಲ್ಯಾಣಮ್ಮ,ಜಯಮ್ಮ, ಸಾಮಾನ್ಯದಿಂದ ಎಚ್.ಆರ್.ಗೋಪಾಲ, ಡಿ.ಆರ್.ಚಂದ್ರಪ್ಪ, ಎಸ್.ಟಿ.ನವೀನ ,ಹೆಚ್.ಎನ್.ನಾಗೇಂದ್ರ, ಎಚ್.ಆರ್ ಪರುಶುರಾಮ್, ಪರಿಶಿಷ್ಟ ಜಾತಿಯಿಂದ ಬಿ.ಪಾಪಯ್ಯ, ಪ್ರವರ್ಗ ಎ ಯಿಂದ ಸಣ್ಣಸ್ವಾಮಿ ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿ ಎಚ್.ಕೆ ದೀಪು ಸ್ಪರ್ಧಿಸಿದ್ದಾರೆ.
ಇನ್ನು ಯಾವುದೇ ಬಣದಿಂದ ಗುರುತಿಸಿಕೊಳ್ಳದೇ ಸಾಮಾನ್ಯದಿಂದ ಎಚ್.ಡಿ.ಶ್ರೀನಿವಾಸ್, ಪರಿಶಿಷ್ಟ ಜಾತಿಯಿಂದ ಶಿವರಾಮು ಸ್ಪರ್ದಿದಿದ್ದು ಕಳೆದ ಮಂಗಳವಾರದಿಂದಲೇ ಅಂತಿಮ ಕಣದಲ್ಲಿ ಉಳಿದ ಮೂರು ಬಣದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತದಾರ ಮನೆ ಬಾಗಿಲಿಗೆ ತೆರಳಿ ತಮ್ಮ ಬಣವನ್ನು ಬೆಂಬಲಿಸುವಂತೆ ಕೋರುತ್ತಾ ಗೆಲ್ಲಿಸಿದರೇ ಸಂಘದ ಸವಲತ್ತು ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡುತ್ತಿದ್ದಾರೆ .
ಜೆಡಿಎಸ್ ಎರಡು ಬಣಗಳಿಗಳಲ್ಲಿ ಯಾರೇ ಅಧಿಕಾರದ ಚುಕ್ಕಾಣಿ ಹಿಡಿಯ ಬೇಕಾದರೇ ಕನಿಷ್ಠ 7 ಸ್ಥಾನವನ್ನು ಗೆಲ್ಲಬೇಕಿದ್ದು ಕಾಂಗ್ರೇಸ್ ಬೆಂಬಲಿತರು 6 ಸ್ಥಾನ ಗೆದ್ದರೆ ಸಾಕು ಜಿಲ್ಲಾ ಬ್ಯಾಂಕಿನ ಪ್ರತಿನಿಧಿಯ ಇನ್ನೊಂದು ಮತದೊಂದಿಗೆ ಅಧಿಕಾರ ಹಿಡಿಯಬಹುದಾಗಿದೆ.
ಇದರ ಜೊತಗೆ ಇಲ್ಲಿಂದ ಗೆದ್ದರೆ ಕೆ.ಆರ್.ನಗರ ಟಿಎಪಿಸಿಎಂಎಸ್ , ಮೈಸೂರು ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಸಹಕಾರ ಯುನಿಯನ್ ನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಇದ್ದು ಇದಕ್ಕಾಗಿ ಮೂರು ಬಣಗಳಲ್ಲಿ ಗೆಲುವಿಗಾಗಿ ಮತದಾರ ಒಲೈಕೆ ಮಾಡಲು ಗುಂಡು-ತುಂಡು ಹಾಕಿಸಿ ಭರ್ಜರಿ ಮತಬೇಟೆ ನಡೆಯುತ್ತಿದ್ದು ಮತದಾರರು ಮಾತ್ರ ಗುಟ್ಟು ಬಿಡದೇ ಮೂರು ಬಣಕ್ಕು ನಿಮಗೆ ಮತ ಹಾಕುವ ಭರವಸೆ ನೀಡುತ್ತಿರುವುದು ಅಭ್ಯರ್ಥಿಗಳನ್ನ ನಿದ್ದೆಗೆಡಿಸಿದೆ.
ಈ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಹೊಸೂರು,ಹಳಿಯೂರು, ಹಳಿಯೂರು ಬಡಾವಣೆ,ದೊಡ್ಡಕೊಪ್ಪಲು, ಸಾಲೇಕೊಪ್ಪಲು,ದಿಡ್ಡಹಳ್ಳಿ ಮತ್ತು ಜವರೇಗೌಡನ ಕೊಪ್ಪಲು ಗ್ರಾಮಗಳು ಬರಲಿದ್ದು ಸಾಲಗಾರ ಕ್ಷೇತ್ರದಲ್ಲಿ 1047 ಮತದಾರರು ಮತ್ತು ಸಾಲಗಾರರಲ್ಲದ ಕ್ಷೇತ್ರದಲ್ಲಿ 379 ಮತದಾರರು ಇದ್ದಾರೆ.
ಚುನಾವಣೆಯು ಆ.27 ರ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು ಅಂದೇ ಮತ ಎಣಿಕೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಶಂಕರೇಗೌಡ ಮತ್ತು ಸಂಘ ಸಿಇಓ ಚಂದ್ರಕಲಾಪಾಪೇಗೌಡ ತಿಳಿಸಿದ್ದಾರೆ.