Saturday, April 19, 2025
Google search engine

Homeರಾಜ್ಯಪಡೆಯುವ ಕೈಗಳು ಮುಂದೆ ನೀಡುವಂತಾಗಲಿ: ಸುರೇಶ್ ಎನ್ ಋಗ್ವೇದಿ

ಪಡೆಯುವ ಕೈಗಳು ಮುಂದೆ ನೀಡುವಂತಾಗಲಿ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಪಡೆಯುವ ಕೈಗಳು ಮುಂದೆ ನೀಡುವಂತಾಗಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಗೌರವ ಸ್ಥಾನಗಳನ್ನು ಅಲಂಕರಿಸಿ ಸಮಾಜಕ್ಕೆ ನೀಡುವ ಗುಣವನ್ನು ಬಳಸಿಕೊಳ್ಳಿ. ಇಂದು ಪಡೆದ ವಸ್ತುಗಳ ಸಾವಿರ ದಷ್ಟು ಸಮಾಜಕ್ಕೆ ಅರ್ಪಿಸುವ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಯೂತ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರದ ವೆಂಕಟಯ್ಯನ ಛತ್ರದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ಬ್ಯಾಗ್ ಹಾಗೂ ಅಧ್ಯಯನದ ಅಗತ್ಯವಿರುವ ವಸ್ತುಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಬುದ್ಧಿವಂತರಿದ್ದು, ಅವರಿಗೆ ಪ್ರೋತ್ಸಾಹ ಮತ್ತು ಸ್ಪೂರ್ತಿ ನೀಡುವ ಕಾರ್ಯವಾಗಬೇಕು .ವಿಶೇಷವಾಗಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಹೆಚ್ಚು ಪಡೆಯಬೇಕು.  ಮಧ್ಯದಲ್ಲಿ ಶಾಲೆಗಳನ್ನು ಬಿಡದೆ ನಿರಂತರವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಯೂಥ್ ಫಾರ್ ಸೇವಾ ಸಂಸ್ಥೆ ಇಡೀ ದೇಶದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದೆ. ಶಿಕ್ಷಣ ,ಆರೋಗ್ಯ, ಕ್ರೀಡೆ ,ಸಮೂಹ ಚಿಂತನೆ ಹಾಗೂ ಪರಿಸರ ಸೇವೆಯ ಮನೋಭಾವನೆಯನ್ನು ಹೆಚ್ಚಿಸುವ ಕಾರ್ಯಗಳನ್ನು ಮಾಡುತ್ತಿದೆ. ಇಂದು ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ, ಉತ್ತುವಳ್ಳಿ, ಶಿವಪುರ ,ಮಾದಾಪುರ, ದೊಡ್ಡರಾಯ ಪೇಟೆ, ಪಣ್ಯದ ಹುಂಡಿ,  ಸರ್ಕಾರಿ ಶಾಲೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ವಿದ್ಯಾರ್ಥಿಗಳು ದೇವರಿದ್ದಂತೆ. ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚಿಸುವ ಮೂಲಭೂತ ಸೌಕರ್ಯಗಳನ್ನು ನೀಡುವ ದಿಕ್ಕಿನಲ್ಲಿ ಹಾಗೂ ಶಿಕ್ಷಣದಲ್ಲಿ ಸ್ಪೂರ್ತಿಯನ್ನು ತುಂಬುವ ಕೆಲಸವನ್ನು ವಿಶೇಷವಾಗಿ ಯೂತ್ ಫಾರ್ ಸೇವಾ ಸಂಸ್ಥೆ ನಿರ್ವಹಿಸುತ್ತಿರುವುದು ಮೆಚ್ಚುವ ಕಾರ್ಯ ವೆಂದರು. ಇಂದು ವಸ್ತುಗಳನ್ನು ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಹೊಂದಿ ಮುಂದೆ ಅಗತ್ಯವಿರುವವರಿಗೆ ಸಹಾಯ ಮಾಡುವ ಮನಸ್ಸು ಬೆಳಸಿಕೊಳ್ಳಿ ಎಂದರು.

ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯ ಯಶ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಬೇಕಾದ ಬ್ಯಾಗು ಮತ್ತು ಪುಸ್ತಕಗಳನ್ನು ನೀಡುತ್ತಿರುವುದು ನಮ್ಮ ಸೌಭಾಗ್ಯ. ಗಡಿ ಭಾಗದ ಮಕ್ಕಳು ವಿಶೇಷವಾಗಿ ಬುದ್ಧಿವಂತರಾಗಿದ್ದು ಉತ್ತಮ ಅವಕಾಶ ನೀಡಿದರೆ ಅವರ ಬದುಕು ಉತ್ತಮವಾಗುತ್ತದೆ. ಶಿಕ್ಷಣದ ಪ್ರೋತ್ಸಾಹ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕು. ಯೂತ್ ಫಾರ್ ಸೇವಾ ಸಂಸ್ಥೆಯ ಮೂಲಕ ಅನೇಕ ಶಿಕ್ಷಣ ,ಪರಿಸರ, ಕಂಪ್ಯೂಟರ್ ಶಿಕ್ಷಣ ,ಕಲೆ ಮತ್ತು ಕೌಶಲ್ಯ ತರಬೇತಿ ಮುಂತಾದ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಮಹದೇವ ನಾಯಕ ವಹಿಸಿದ್ದರು. ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯೂಥ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ವಿಷ್ಣು ರವರು ಮಾತನಾಡಿ ಇವತ್ತು ಸೇವಾ ಸಂಸ್ಥೆ ಬಹಳ ಮುಖ್ಯವಾಗಿ ಜಿಲ್ಲೆಯ ಮಕ್ಕಳ ಪ್ರತಿಭೆಯನ್ನು ವಿಕಾಸಗೊಳಿಸಲು ಅವರಲ್ಲಿರುವ ಕಲೆ ಮತ್ತು ಕೌಶಲ್ಯ ಹಾಗೂ ವಿವಿಧ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಚಿಗುರು ಕಾರ್ಯಕ್ರಮವನ್ನು ಹಾಗೂ ಶಿಕ್ಷಣದ ಪೂರಕ ವಾತಾವರಣವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಶಿಕ್ಷಣ ಇಲಾಖೆ ಪೂರ್ಣ ಸಹಕಾರವನ್ನು ನೀಡುತ್ತಿದೆ ಎಂದು ತಿಳಿಸಿದರು.

ವಿವಿಧ ಗ್ರಾಮಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ ವಿ ರಾಜಣ್ಣ, ಚಿಕ್ಕರಾಜು, ಅಭಿಷೇಕ್, ಸಂತೋಷ್, ದರ್ಶನ್, ರಾಜು, ಪ್ರಜ್ವಲ್ ,ಅವಿನಾಶ್, ರಾಹುಲ್, ಸಾಯಿ ರಾಮ್ ,ರಾಧಿಕಾ ಮಣಿ ಕುಮಾರ್ ವನಜ, ಮೋನಿಕಾ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಸ್ವಯಂಸೇವಕರು, ಇವತ್ತು ಫಾರ್ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular