Saturday, April 19, 2025
Google search engine

Homeರಾಜ್ಯಮಂಡ್ಯ: ಮನ್ಮುಲ್ ನಿಂದ ಮತ್ತೆರಡು ಹೊಸ ಉತ್ಪನ್ನ ಲಾಂಚ್.!

ಮಂಡ್ಯ: ಮನ್ಮುಲ್ ನಿಂದ ಮತ್ತೆರಡು ಹೊಸ ಉತ್ಪನ್ನ ಲಾಂಚ್.!

ಮಂಡ್ಯ: ನಂದಿನಿಯ ಎರಡೂ ಉತ್ಕೃಷ್ಟ ಉತ್ಪನ್ನಗಳನ್ನು ಇಂದು ಮನ್ ಮುಲ್ ಲಾಂಚ್ ಮಾಡಿದೆ.

ಮಂಡ್ಯದ ಮನ್ಮುಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ನೂತನ ಉತ್ಪನ್ನಗಳಾದ ಸ್ಪೆಷಲ್ ಹಾಲಿನ ಬರ್ಫಿ ಹಾಗೂ ಪನ್ನೀರ್ ನಿಪ್ಪಟ್ಟುವನ್ನು  ಮನ್ಮುಲ್ ಅಧ್ಯಕ್ಷ ಬೋರೇಗೌಡ ಬಿಡುಗಡೆ ಮಾಡಿದರು. ಬಳಿಕ ಹೊಸ ಉತ್ಪನ್ನಗಳ ರುಚಿ ಸವಿದರು.

ಇದೇ ವೇಳೆ ಮಾತನಾಡಿದ ಅವರು, ಮಂಡ್ಯ ಹಾಲು ಒಕ್ಕೂಟದಿಂದ ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಹೊಸ ಹೊಸ ರೀತಿಯಲ್ಲಿ ಪ್ರಾಡಕ್ಟ್ ಕೊಡ್ತಿದ್ದೇವೆ. ಈಗಾಗಲೇ ನಂದಿನಿ ತುಪ್ಪ ಸಾಕಷ್ಟು ಪ್ರಮಾಣದಲ್ಲಿ ಸೇಲ್ ಆಗ್ತಿದೆ. ಹೊಸ ಉತ್ಪನ್ನಗಳ ತಯಾರಿಕೆಗಳಿಂದ ಮನ್ಮುಲ್ ಗೆ ಮತಷ್ಟು ಆದಾಯ ಬರಲು ಸಾಧ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಘುನಂದನ್, ನಿರ್ದೇಶಕ ಉಮ್ಮಡಳ್ಳಿ ಶಿವಪ್ಪ, ರೂಪ, ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular