Sunday, April 20, 2025
Google search engine

Homeಸ್ಥಳೀಯಬ್ರಾಹ್ಮಣರೇ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ

ಬ್ರಾಹ್ಮಣರೇ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ


ಮೈಸೂರು: ಸ್ವಾತಂತ್ರ್ಯ ನಂತರವೂ ದೇಶದ ಪ್ರಮುಖ ಸಾರ್ಜಜನಿಕ ಹುದ್ದೆಗಳಲ್ಲಿ ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣರೇ ಹೆಚ್ಚಿದ್ದಾರೆ ಎಂದು ಬೆಂಗಳೂರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಜಿ.ಮೋಹನ್ ಗೋಪಾಲ್ ಕಳವಳ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಹಾಗೂ ಇಂಡಿಯನ್ ಪಾಲಿಟ ಪೋರಂ ಸಹಯೋಗದಲ್ಲಿ ವಿಶ್ವಜ್ಞಾನಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷೇತ್ರ ಪುನರ್ ವಿಂಗಡಣೆ: ಅಂತರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪೈಕಿ ಅತೀ ಹೆಚ್ಚಿನ ಸಂಖ್ಯೆಯವರು ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ ಸಮುದಾಯದವರೇ ಹೆಚ್ಚಿದ್ದಾರೆ. ದಲಿತರು, ಹಿಂದುಳಿದ ವರ್ಗದವರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರು ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೇ ಕೇವಲ ಒಂದು ಸಮುದಾಯ ಏಕಸ್ವಾಮ್ಯ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಜನಸಂಖ್ಯೆ ವಿಚಾರದಲ್ಲಿಯೂ ಬ್ರಾಹ್ಮಣೇತರ ಸಮುದಾಯಗಳು ಹೆಚ್ಚಿದ್ದರೂ ಅವರಿಗೆ ಕಾನೂನು ರೀತಿ ಸಿಗಬೇಕಾದ ಪ್ರಾತಿನಿತ್ಯ ಇಂದಿಗೂ ಸಿಕ್ಕಿಲ್ಲ. ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ರಾಜ್ಯದವರಿಗಿಂತ ಹಿಂದಿ ಭಾಷೆ ಪ್ರಾಬಲ್ಯವಿರುವ ರಾಜ್ಯದವರೇ ಹೆಚ್ಚಿದ್ದಾರೆ. ಇದು ರಾಜಕೀಯ ಅಸಮಾನತೆಗೂ ಕಾರಣವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಪ್ರಚಲಿತದಲ್ಲಿದ್ದ ಡಬಲ್ ಇಂಜಿನ್ ಸರ್ಕಾರ ಎಂಬ ರಾಜಕೀಯ ಸಿದ್ಧಾಂತ ದೇಶದ್ಯಾಂತ ಹೆಚ್ಚು ಸದ್ದು ಮಾಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾಗಳು ಇದನ್ನು ಹೆಚ್ಚು ಮುನ್ನಲೆಗೆ ತಂದು ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದವು. ಆದರೆ, ಈ ಡಬಲ್ ಇಂಜಿನ್ ಸರ್ಕಾರದ ಸೂತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಇಂಡಿಯನ್ ಪಾಲಿಟಿ ಫೋರಂ ಮುಖಂಡ ಡಾ.ಎಸ್.ಜಿ.ಒಂಬತ್ ಕೆರೆ ಮಾತನಾಡಿ, ದೇಶದ ರಾಜಕೀಯ ಅಸಮಾನತೆ ಎನ್ನುವುದು ಹೆಚ್ಚಾಗುತ್ತಲೇ ಇದೆ. ದಕ್ಷಿಣ ಹಾಗೂ ಉತ್ತರ ರಾಜ್ಯಗಳ ರಾಜಕೀಯ ಪ್ರಾತಿನಿಧ ಗಮನಿಸಿದಾಗ ಇದು ತಿಳಿದು ಬರುತ್ತದೆ. ಪ್ರಧಾನಿ ಮೋದಿ ಅವರು ಇತ್ತೀಚಿಗೆ ಒಂದು ಸಾವಿರ ಆಸನವುಳ್ಳ ನೂತನ ಸಂಸತ್ ಭವನ ಉದ್ಘಾಟನೆ ಮಾಡಿದ್ದಾರೆ. ಆದರೆ, ಉತ್ತರ ಮತ್ತು ದಕ್ಷಿಣ ರಾಜ್ಯಗಳ ರಾಜಕೀಯ ಬಿಕ್ಕಟಿನ ಬಗ್ಗೆಯೂ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಎಕನಾಮಿಕ್ ಮತ್ತು ಪೊಲಿಟಿಕಲ್ ವೀಕ್ಲಿಯ ಮಾಜಿ ಸಂಪಾದಕ ಪ್ರೊ.ಗೋಪಾಲ್ ಗುರು, ಪ್ರೊ.ಆರ್.ಇಂದಿರಾ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ನರೇಂದ್ರ ಕುಮಾರ್ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular