ಕೆ ಆರ್ ನಗರ: ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಂಘದ ಮೂರನೇ ವರ್ಷದ ಸರ್ವ ಸದಸ್ಯರ ಮಹಾಸಭೆಯನ್ನು ಮಾಜಿ ಶಾಸಕ ಸಾ ರಾ ಮಹೇಶ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಸಾರಾ ಮಹೇಶ್, ಒಕ್ಕಲಿಗರ ಕೊ-ಆಪರೇಟ್ ಸೊಸೈಟಿಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಹಾಗೂ ಕೇವಲ ಒಕ್ಕಲಿಗರಿಗಲ್ಲದೆ ಬೇರೆ ಯವರಿಗೂ ಸಹಾಯವನ್ನು ನೀಡುತ್ತಾ ಬಂದಿರುವುದು ತುಂಬಾ ಖುಷಿಯ ವಿಚಾರ ಎಂದು ತಿಳಿಸಿದರು.
ಶಾಸಕ ಸ್ಥಾನ ಮುಳ್ಳಿನ ಹಾದಿ ಇದ್ದ ಹಾಗೆ ನಮ್ಮ ಕ್ಷೇತ್ರದ ಜನ ನನ್ನನ್ನು ಸತತವಾಗಿ ಮೂರು ಬಾರಿ ಆಯ್ಕೆ ಮಾಡಿದ್ದು, ನಾನು ಜನಸೇವೆ ಮಾಡಲು ಮೂರು ಬಾರಿ ಅವಕಾಶ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಈ ಬಾರಿ ನನ್ನನ್ನು ತಿರಸ್ಕರಿಸಲು ನನಗೂ ಕಾರಣ ತಿಳಿದಿಲ್ಲ ಇಂದು ಬಾವುಕವಾಗಿ ನುಡಿದ ಶಾಸಕರು ಇನ್ನು ಮುಂದೆಯೂ ಸಹ ನನ್ನ ಕೈಯಲಾದ ಜನಸೇವೆಯನ್ನು ಮಾಡಿಕೊಂಡು ಬರುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳಿಂದ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿರುವ ಮೂಲಕ ಆಚರಿಸಿದರು.