ಮಂಗಳೂರು(ದಕ್ಷಿಣ ಕನ್ನಡ): 20 ವರ್ಷಗಳ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಿದ್ಧಕಟ್ಟೆಯ ಭಾರತಿ ಮತ್ತು 22 ವರ್ಷಗಳ ಹಿಂದೆ ನಡೆದ ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಅವರ ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿ.ಪಂ. ಮಾಜಿ ಉಪಾಧ್ಯಕ್ಷ ಯಂ. ತುಂಗಪ್ಪ ಬಂಗೇರ ಅವರ ನೇತೃತ್ವದ ನಿಯೋಗವು ಬಂಟ್ವಾಳ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದರು.
ಈ ಸಂದರ್ಭ ಪಿಲಾತಬೆಟ್ಟು ಗ್ರಾ. ಪಂ ಅಧ್ಯಕ್ಷೆ ಶಾರದ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್, ಸುರೇಶ್ ಕುಲಾಲ್, ಪಿಲಾತಬೆಟ್ಟು ಗ್ರಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಹೆಗ್ಡೆ, ಹಿರಿಯರಾದ ಗಂಗಾಧರ ಪೂಜಾರಿ ಕಜೆಕಾರು, ತಾರಾನಥ್ ಕಜೆಕಾರು, ಮಧು ನಾಡೇಲು, ಪ್ರಭಾಕರ ಪಿ.ಯಂ, ಪ್ರಮೋದ್ ಕುಮಾರ್ ಮೂರ್ಜೆ ಮೊದಲಾದವರು ಉಪಸ್ಥಿತರಿದ್ದರು.