Saturday, April 19, 2025
Google search engine

Homeಕ್ರೀಡೆಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ನೀರಜ್ ಚೋಪ್ರಾ

ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ನೀರಜ್ ಚೋಪ್ರಾ

ಬುಡಾಪೆಸ್ಟ್ (ಹಂಗೇರಿ): ಭಾರತದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಗಾಯದಿಂದ ಬಳಲುತ್ತಿದ್ದ ಚೋಪ್ರಾ, ಹಂಗೇರಿಯ ರಾಜಧಾನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತನ್ನ ಎರಡನೇ ಸರದಿಯಲ್ಲಿ ೮೮.೧೭ ರ ಬೃಹತ್ ಎಸೆತದೊಂದಿಗೆ ಚಿನ್ನಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ಅರ್ಷದ್ ನದೀಮ್ ೮೭.೮೨ ಅಂತರ ಎಸೆದು, ತಮ್ಮ ದೇಶಕ್ಕೆ ಮೊದಲ ವಿಶ್ವ ಚಾಂಪಿಯನ್‌ಶಿಪ್?ನಲ್ಲಿ ಬೆಳ್ಳಿ ಪದಕವನ್ನು ಪಡೆದರು. ಜೆಕ್ ಗಣರಾಜ್ಯದ ಯಾಕೂಬ್ ವಡ್ಲೆಜ್ ೮೬.೬೭ ಜಾವೆಲಿನ್ ಎಸೆದು ಕಂಚಿನ ಪದಕಕ್ಕೆ ತೃಪ್ಪಿಪಟ್ಟುಕೊಂಡರು. ಕಣದಲ್ಲಿದ್ದ ಇತರ ಇಬ್ಬರು ಭಾರತೀಯರು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಪದಕ ಪಡೆಯುವಲ್ಲಿ ವಿಫಲರಾದರು. ಕಿಶೋರ್ ಕುಮಾರ್ ಜೆನಾ ಅವರು ೮೪.೭೭ರ ವೈಯಕ್ತಿಕ ಅತ್ಯುತ್ತಮ ಎಸೆತದೊಂದಿಗೆ ಐದನೇ ಸ್ಥಾನ ಪಡೆದರು. ಮನು ೮೪.೧೪ ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಆದರೆ, ಭಾರತವು ನೀರಜ್ ಚೋಪ್ರಾರಿಂದ ಹೆಚ್ಚಿನ ಭರವಸೆ ಹೊಂದಿತ್ತು. ಚೋಪ್ರಾ ತಮ್ಮ ಎರಡನೇ ರೌಂಡ್‌ನಲ್ಲಿ ಅದ್ಭುತವಾದ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡರು.

ಚಿನ್ನದ ಪದಕದ ಮುದ್ರೆಯೊತ್ತಿದ ಚೋಪ್ರಾ: ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಕೇವಲ ೮೪.೬೨ ಮೀ ಎಸೆಯಲು ಸಾಧ್ಯವಾದರೆ, ನದೀಮ್ ೮೭.೧೫ ಮೀ ಎಸೆದರು ಹಾಗೂ ಜರ್ಮನಿಯ ಜೂಲಿಯನ್ ವೆಬರ್ ಅವರ ೮೫.೭ ಪ್ರಯತ್ನದಿಂದ ಮೂರನೇ ಸ್ಥಾನದಲ್ಲಿ ಉಳಿದರು. ಅರ್ಷದ್ ನಡೆಮ್ ಆರನೇ ಸುತ್ತಿನಲ್ಲಿ ದೊಡ್ಡದರೊಂದಿಗೆ ಅಂತಿಮ ಪ್ರಯತ್ನವನ್ನು ಮಾಡಿದರು. ಆದರೆ, ಅದಕ್ಕೂ ಮುನ್ನವೇ ಚೋಪ್ರಾ ಚಿನ್ನದ ಪದಕದ ಮುದ್ರೆಯೊತ್ತಿದರು. ನೀರಜ್ ಚೋಪ್ರಾ ಭಾನುವಾರ ಮತ್ತೊಮ್ಮೆ ಇತಿಹಾಸ ಬರೆದಿದ್ದು, ಪುರುಷರ ಜಾವೆಲಿನ್ ಫೈನಲ್‌ನಲ್ಲಿ ೮೮.೧೭ ಮೀಟರ್ ದೊಡ್ಡ ಎಸೆತದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

RELATED ARTICLES
- Advertisment -
Google search engine

Most Popular