Sunday, April 20, 2025
Google search engine

Homeಕ್ರೀಡೆವಿಶ್ವ ಅಥ್ಲೆಟಿಕ್ಸ್ : ರಾಷ್ಟ್ರೀಯ ದಾಖಲೆ ಮುರಿದು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಪಾರುಲ್

ವಿಶ್ವ ಅಥ್ಲೆಟಿಕ್ಸ್ : ರಾಷ್ಟ್ರೀಯ ದಾಖಲೆ ಮುರಿದು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಪಾರುಲ್

ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸೋಮವಾರ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ೨೦೨೩ ರ ೩,೦೦೦ ಮೀಟರ್ಸ್ ಸ್ಟೀಪಲ್ ಚೇಸ್ ಫೈನಲ್ ನಲ್ಲಿ ಭಾರತದ ಅತ್ಲೀಟ್ ಪಾರುಲ್ ಚೌಧರಿ ಹನ್ನೊಂದನೇ ಸ್ಥಾನ ಪಡೆದರು.

ಆದಾಗ್ಯೂ, ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪಾರುಲ್ ೯:೧೫.೩೧ ಕ್ಕೆ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮುರಿದರು. ರಾಷ್ಟ್ರೀಯ ದಾಖಲೆಯನ್ನು ಸಾಧಿಸುವ ಮೂಲಕ ಪಾರುಲ್ ೨೦೨೪ ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು.

ಬ್ರೂನಿ ಅಥ್ಲೀಟ್ ವಿನ್ ಫ್ರೆಡ್ ಮ್ಯೂಟಿಲ್ ಯವಿ ೮:೫೪.೨೯ ಸಮಯದೊಂದಿಗೆ ಗುರಿ ತಲುಪಿ ಚಿನ್ನದ ಪದಕವನ್ನು ಪಡೆದರು, ಕೀನ್ಯಾದ ಬೀಟ್ರಿಸ್ ಚೆಪ್ಕೋಚ್ ಅವರು ತಮ್ಮ ಋತುವಿನ ಅತ್ಯುತ್ತಮ ಸಮಯ ೮:೫೮.೯೮ ಸೆಕೆಂಡ್ಗೆ ಗುರಿ ತಲುಪಿ ಬೆಳ್ಳಿ ಗೆದ್ದರು ಹಾಗೂ ಕೀನ್ಯಾದ ಇನ್ನೊಬ್ಬ ಅಥ್ಲೀಟ್ ಫೇಯ್ತ್ ಚೆರೊಟಿಚ್ ತಮ್ಮ ವೈಯಕ್ತಿಕ ಅತ್ಯುತ್ತಮ ಮಾರ್ಕ್ ೬೯:೦೦ ಗೆಲುವನ್ನು ಸಾಧಿಸಿ. ಕಂಚು ಗೆದ್ದರು.

ಮತ್ತೊಂದೆಡೆ, ಭಾರತೀಯ ಪುರುಷರ ೪x೪೦೦ ಮೀಟರ್ಸ್ ರಿಲೇ ತಂಡವು ೨೦೨೩ ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ೪x೪೦೦ ಮೀಟರ್ಸ್ ರಿಲೇ ಓಟದ ಫೈನಲ್ ನಲ್ಲಿ ಐದನೇ ಸ್ಥಾನ ಪಡೆಯಿತು. . ಮುಹಮ್ಮದ್ ಅನಸ್ ಯಾಹ್ಯಾ, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತ ತಂಡವು ೨:೫೯.೯೨ ಸೆಕೆಂಡ್ ಗೆ ಗುರಿ ತಲುಪಿತು.

ಕ್ವಿನ್ಸಿ ಹಾಲ್, ವೆರ್ನಾನ್ ನಾರ್ವುಡ್, ಜಸ್ಟಿನ್ ರಾಬಿನ್ಸನ್ ಹಾಗೂ ರೈ ಬೆಂಜಮಿನ್ವಾನ್ ಅವರಿದ್ದ ಅಮೆರಿಕ ತಂಡವು ೨:೫೭.೩೧ ಸೆಕೆಂಡ್ ಗೆ ಗುರಿ ತಲುಪಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಫ್ರಾನ್ಸ್ ೨:೫೮.೪೫ ಸೆಕೆಂಡ್ ನಲ್ಲಿ ಗುರಿ ತಲುಪಿ ಬೆಳ್ಳಿಯನ್ನು ಪಡೆದರೆ, ಗ್ರೇಟ್ ಬ್ರಿಟನ್ ೨:೫೮.೭೧ ಸೆಕೆಂಡ್ ನಲ್ಲಿ ಗುರಿ ತಲುಪಿ ಕಂಚು ಪಡೆದಿದೆ.

RELATED ARTICLES
- Advertisment -
Google search engine

Most Popular