ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ರೈತರು ಹಾಗೂ ಸಂಘಟನಕಾರರು ಪ್ರತಿಭಟಿಸಿದರು.
ಪಟ್ಟಣದ ಅಂಗಡಿ ಮುಗಟ್ಟನ್ನು ಬಂದ್ ಮಾಡಿ, ಮಾರುಕಟ್ಟೆಯನ್ನು ಬಂದ್ ಮಾಡಿದ ಘಟನೆ ನಡೆಯಿತು.
ಮಳೆವಿಲ್ಲದೆ ಬಿತ್ತಿದ ಬೆಳೆಗಳು ಬಾಡಿ ಹೋಗಿದ್ದು, ಸರ್ಕಾರದಿಂದ ಬೆಳೆ ಹಾನಿ ಪರಿಹಾರ ದೊರಕಿಸಬೇಕು. ರೈತರು ಬಿತ್ತಿದ ಬೆಳೆಗಳಿಗೆ ಬೆಳೆ ವಿಮಾ ಕಂಪನಿಯಿಂದ ವಿಮಾ ಸೌಲಭ್ಯ ಒದಗಿಸಬೇಕು. ರಾಷ್ಟ್ರಿಕೃತ ಬ್ಯಾಂಕ್ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಬೆಳೆಸಾಲವನ್ನು ಮನ್ನಾ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಸುವುದು, ರೈತರ ಪಂಪಸೆಟ್ ಗಳಿಗೆ ಹಗಲು ನಿರಂತರ 3 ಫೇಸ್ ವಿದ್ಯುತ್ ಪೂರೈಸಬೇಕು. ರೈತರ ಜಮೀನುಗಳಿಗೆ ಸಮರ್ಪಕ ಸಂಪರ್ಕ ರಸ್ತೆ ನಿರ್ಮಿಸಬೇಕು. ರೈತರಿಗೆ, ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತರಬೇಕು. ನೂತನ ತಾಲೂಕನಲ್ಲಿ ಮುಖ್ಯ ಕಚೇರಿ ಹಾಗೂ ತಾಲೂಕ ಕಟ್ಟಡ ಪ್ರಾರಂಬಿಸಬೇಕು ಹಾಗೂ ಖುಷ್ಕಿಭೂಮಿಯಲ್ಲಿ ಕೃಷಿ ಹೊಂಡಗಳನ್ನು ಹೆಚ್ಚಿನ ಪ್ರಮಾಣ ನಿರ್ಮಾಣ ಮಾಡಿ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
