Monday, April 21, 2025
Google search engine

Homeಅಪರಾಧಹಾಸನ : ದಂಪತಿ ಸಾವು ಪ್ರಕರಣಕ್ಕೆ ತಿರುವು, ಮಗನ ಬಂಧನ

ಹಾಸನ : ದಂಪತಿ ಸಾವು ಪ್ರಕರಣಕ್ಕೆ ತಿರುವು, ಮಗನ ಬಂಧನ

ಅರಕಲಗೂಡು: ತಾಲೂಕಿನ ಬಿಸಿನಹಳ್ಳಿಯ ಬಳಿ ಇತ್ತೀಚೆಗೆ ಆಹಾರ ಸೇವಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ದಂಪತಿ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ತನಿಖೆ ವೇಳೆ ದಂಪತಿ ಸಾವಿನ ರಹಸ್ಯ ಬಯಲಾಗಿದ್ದು, ತನ್ನ ಅಕ್ರಮ ಸಂಬಂಧದ ಬಗ್ಗೆ ಆಕ್ಷೇಪಿಸಿದ್ದಕ್ಕೆ ಮಗನೇ ಪಲಾವ್ ನಲ್ಲಿ ವಿಷ ಬೆರೆಸಿ ತಂದೆ -ತಾಯಿಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಮಂಜುನಾಥ್ (೨೭) ಬಂಧಿತ ಆರೋಪಿಯಾಗಿದ್ದು, ಉಮಾ(೪೮), ನಂಜುಂಡಪ್ಪ (೫೫) ಮೃತ ದಂಪತಿಗಳಾಗಿದ್ದಾರೆ. ಕಲುಷಿತ ಅಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ, ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿರುವ ಘಟನೆ ತಾಲೂಕಿನ ಬಿಸಿನಹಳ್ಳಿಯಲ್ಲಿ ನಡೆದಿತ್ತು. ಕಳೆದ ಆಗಸ್ಟ್ ೧೫ ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ದಂಪತಿಗಳ ಆರೋಗ್ಯ ಕೆಟ್ಟಿತ್ತು. ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಸಂದರ್ಭದಲ್ಲಿ ನೆನ್ನೆ ಇಬ್ಬರೂ ದಿಢೀರ್ ಮೃತಪಟ್ಟಿದ್ದರು.

ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದ ಕೊಣನೂರು ಪೊಲೀಸರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಎರಡೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ ಮೃತರ ಮಗ ಮಂಜುನಾಥ್ ನನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular