ವಿನಯ್ ದೊಡ್ಡಕೊಪ್ಪಲು
ಹೊಸೂರು: ತೀವ್ರಕೂತು ಹಲ ಕೆರಳಿಸಿದ್ದ ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಚ್.ಆರ್.ಮಹೇಶ್ ಬಣ 12 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಸ್ಥಾನಗಳನ್ನ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ಎಚ್.ಆರ್.ಮಹೇಶ್ ನೇತೃತ್ವದ ಬಣದಲ್ಲಿ ಸಾಲಗಾರ ಕ್ಷೇತ್ರದಿಂದ ಎಚ್.ಆರ್.ಮಹೇಶ್ 480, ಎಸ್.ಬಿ.ಹುಚ್ಚೇಗೌಡ 474, ಎಚ್.ಆರ್.ಕೃಷ್ಣಮೂರ್ತಿ 396, ಸಿ.ಎಂ.ರಾಜೇಗೌಡ 209, ಕಮಲಮ್ಮ 351,ಪಾರ್ಥಯ್ಯ 220, ಕೆಂಪನಾಯಕ 198 ಮತಗಳನ್ನು ಗೆಲುವುವಿನ ನಗೆ ಬೀರಿದರು
ಇದೇ ಬಣದಲ್ಲಿ ಸ್ಪರ್ಧಿಸಿದ್ದ ಸಾಲಗಾರ ಕ್ಷೇತ್ರದ ಕೆ.ಮಹದೇವ್226 ,ಬಿ.ರಮೇಶ್ 211, ಎಂ.ಎಂ ರಂಜಿತಾ 265, ಎಚ್.ಜೆ ಕುಮಾರ 385 ಮತ್ತು ಸಾಲಗಾರರಲ್ಲದ ಕ್ಷೇತ್ರದ ಅನಿಲ್ ಕುಮಾರ್ 72 ಮತಗಳನ್ನು ಪಡೆದು ಸೋಲನ್ನಪ್ಪಿದ್ದರು.
ಇನ್ನೊಂದು ಜೆಡಿಎಸ್ ಬೆಂಬಲಿತ ಹಳಿಯೂರು ಎಚ್.ಎಸ್.ಜಗದೀಶ್ ನೇತೃತ್ವದ ಬಣದಲ್ಲಿ ಸಾಲಗಾರ ಕ್ಷೇತ್ರದಿಂದ ಎಚ್.ಎಸ್.ಜಗದೀಶ್ 514, ವಿವೇಕಾನಂದ 425,ಎಚ್.ಎನ್.ರಮೇಶ್410, ಸಾಲಗಾರರಲ್ಲದ ಕ್ಷೇತ್ರದ ಎಚ್.ಬಿ.ನವೀನ್ ಕುಮಾರ್ 142 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಇದೇ ಬಣದ ಸಾಲಗಾರ ಕ್ಷೇತ್ರದ ಗೋಪಾಲ 232, ಎಚ್.ಆರ್.ಸತೀಶ್ ಚಂದ್ರ 203, ,ಜಯರಾಮೇಗೌಡ 345,ಗೌರಮ್ಮ 130, ಜ್ಯೋತಿ 246, ತಿಮ್ಮನಾಯಕ 169 , ಸ್ವಾಮಿ 130, ಪರಾಜಿತ ಗೊಂಡರು.
ಇನ್ನು ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ದಿಸಿದ್ದ ಕಲ್ಯಾಣಮ್ಮ 267 ಮತಗಳನ್ನು ಪಡೆದು ಗೆಲುವು ಸಾಧಿಸಿದರೇ ಸಾಲಗಾರ ಕ್ಷೇತ್ರದ ಆನಂತ249 , ಎಚ್.ಆರ್.ಗೋಪಾಲ183 , ಡಿ.ಆರ್. ಚಂದ್ರಪ್ಪ 204 ,ಜಯಮ್ಮ 132 , ಎಸ್.ಟಿ.ನವೀನ 168 , ಎಚ್.ಎನ್.ನಾಗೇಂದ್ರ 252, ,ಎಚ್.ಆರ್.ಪರುಶುರಾಮ್ 370 , ಪಾಪಯ್ಯ 141 , ಟಿ.ಎಸ್. ಟಿ.ಎಸ್ ಸಣ್ಣಸ್ವಾಮಿ 164 ಮತ್ತು ಸಾಲಗಾರರಲ್ಲದ ಕ್ಷೇತ್ರದ ಎಚ್.ಕೆ.ದೀಪು 111 ಮತಗಳನ್ನು ಪಡೆದು ಸೋಲುಂಡರು.
ಇನ್ನು ಯಾವ ಬಣದಲ್ಲಿ ಗುರುತಿಸಿ ಕೊಳ್ಳದ ಸಾಲಗಾರ ಕ್ಷೇತ್ರದ ಎಚ್.ಡಿ.ಶ್ರೀನಿವಾಸ್ 102 , ಮತ್ತು ಶಿವರಾಮ್ 91 ಮತಗಳನ್ನು ಪಡೆದು ಪರಾಭವಗೊಂಡರು.
ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರಗೆ ನಡೆದ ಚುನಾವಣೆಯಲ್ಲಿ ಸಾಲಗಾರ ಕ್ಷೇತ್ರದಿಂದ ಮತಗಳಲ್ಲಿ 1047 ಮತಗಳು926 ಚಲಾವಣೆಗೊಂಡರೇ 24 ಮತಗಳು ತಿರಸ್ಕಾರಗೊಂಡರೇ ಇನ್ನು ಸಾಲಗಾರರಲ್ಲದ ಕ್ಷೇತ್ರದ 379 ಮತಗಳಲ್ಲಿ 330 ಮತಗಳು ಚಲಾವಣೆಗೊಂಡು 5 ಮತಗಳು ತಿರಸ್ಕಾರಗೊಂಡವು.
ಚುನಾವಣಾಧಿಕಾರಿಯಾಗಿ ಕೆ.ಆರ್.ನಗರ ಸಹಕಾರ ಇಲಾಖೆಯ ಎಸ್.ಎಸ್.ರವಿಕುಮಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಶಿಕ್ಷಣ ಇಲಾಖೆಯ ಶಂಕರೇಗೌಡ ಕಾರ್ಯನಿರ್ವಹಿಸಿದರೇ ಸಂಘದ ಸಿಇಓ ಚಂದ್ರಕಲಾಪಾಪೇಗೌಡ ಸಹಕಾರ ನೀಡಿದರು.
ಮುನ್ನಚ್ಚರಿಕೆಯ ಕ್ರಮವಾಗಿ ಸಾಲಿಗ್ರಾಮ ಠಾಣೆ ಮತ್ತು ಚುಂಚನಕಟ್ಟೆ ಉಪಪೊಲೀಸ್ ಠಾಣೆಯ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಿದ್ದರು.
ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರ ಎರಡು ಬಣದ ಸ್ಪರ್ದೆಯಿಂದ ಕಾಂಗ್ರೇಸ್ ಬೆಂಬಲಿತರಿಗೆ ಲಾಭ ಆಗುತ್ತದೆ ಎಂಬ ನಿರೀಕ್ಷೆ ಮಾಡಲಾಗಿತ್ತು ಈ ನಿರೀಕ್ಷೆಯನ್ನು ಮೀರಿ ಎಚ್.ಮಹೇಶ್ ಬಣ 7 ಸ್ಥಾನ ಪಡೆದರೇ ಎಚ್.ಎಸ್.ಜಗದೀಶ್ ಬಣ 4 ಸ್ಥಾನ ಮತ್ತು ಕಾಂಗ್ರೇಸ್ ಬೆಂಬಲಿತರು 1 ಸ್ಥಾನಕ್ಕೆ ತೃಪ್ತಿಪಡುವಂತೆ ಆಯಿತಲ್ಲದೇ ಕಳೆದ ಬಾರಿಯಂತೆ ಈ ಬಾರಿಯು ಎಚ್.ಆರ್.ಮಹೇಶ್ ಬಣ ಮೇಲುಗೈ ಸಾಧಿಸಿದರೇ ಇದೇ ಪ್ರಥಮವಾಗಿ ಚುನಾವಣಾ ಅಖಾಡಕ್ಕೆ ಇಳಿದ ಎಚ್.ಎಸ್.ಜಗದೀಶ್ 514 ಅತಿ ಹೆಚ್ಚು ಮತಗಳನ್ನು ಪಡೆದರು.