Sunday, April 20, 2025
Google search engine

Homeರಾಜ್ಯಮಂಗಳೂರು: ಅಪರಿಚಿತ ವ್ಯಕ್ತಿಯ ಪತ್ತೆಗೆ ಕೋರಿಕೆ

ಮಂಗಳೂರು: ಅಪರಿಚಿತ ವ್ಯಕ್ತಿಯ ಪತ್ತೆಗೆ ಕೋರಿಕೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಪಣಂಬೂರು ಐಓಸಿಎಲ್ ಕಂಪನಿಯ ಹಿಂಭಾಗದ ಕಡಲ ಕಿನಾರಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ ವಿವರ:

ಪ್ರಾಯ ಸುಮಾರು 27 ರಿಂದ 30 ವರ್ಷ, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಸಾಧಾರಣ ಶರೀರ ಹೊಂದಿರುತ್ತಾರೆ. ಮೃತ ಶರೀರದ ಮೇಲೆ ನೀಲಿ ತಿಳಿ ಹಸಿರು ಬಣ್ಣದ ತುಂಬು ತೋಳಿನ ಶರ್ಟ್, ಗಾಡ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಒಳಗೆ ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದು, ಬಲಗೈ ಮಣಿಕಟ್ಟಿಗೆ ಕೆಂಪು ದಾರ ಕಟ್ಟಿದ್ದು, ಜನಿವಾರ  ಧರಿಸಿರುತ್ತಾರೆ.  ಮೃತಶರೀರವು ಕೊಳೆತು ಚರ್ಮ ಜಾರಿರುವುದು ಕಂಡು ಬಂದಿದೆ.

ಈ ಅಪರಿಚಿತ ವ್ಯಕ್ತಿಯ ಸಂಬಂಧಿಕರು ಇದ್ದಲ್ಲಿ ಪಣಂಬೂರು ಪೊಲೀಸ್ ಠಾಣೆಯ ದೂ. ಸಂಖ್ಯೆ 0824-2220530, 9480805335, ಸಿಟಿ ಕಂಟ್ರೋಲ್ ರೂಮ್ 0824-2220800 ಮೂಲಕ ಕರೆ ಮಾಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular