ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ರೌಂಡ್ಸ್ ಹಾಕಿದ್ದಾರೆ. ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ ರಾಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ತಾನು ಈ ಹಿಂದೆ ತಾವು ಕೆಲಸ ಮಾಡಿದ್ದ ಜಯನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.
ಸದ್ದಿಲ್ಲದೆ ಭೇಟಿ ಇಡೀ ಬಿಎಂಟಿಸಿ ಸಿಬ್ಬಂದಿಗೆ ಶಾಕ್ ಜೊತೆಗೆ ಖುಷಿಗೆ ಪಾರವೇ ಇಲ್ಲದಂತಾಯ್ತು. ಜಯನಗರ ಬಿಎಂಟಿಸಿ ಡಿಪೋಗೆ ೧೧.೩೦ ಕ್ಕೆ ಬಂದ ರಜನಿಕಾಂತ್ ೧೧.೪೫ ರವರೆಗೂ ಡಿಪೋದಲ್ಲೇ ಇದ್ದರು. ಅಲ್ಲಿದ್ದ ಸಿಬ್ಬಂದಿಗಳ ಜೊತೆ ಮಾತನಾಡಿ ಡಿಪೋ ಒಳಗೆ ಸುತ್ತಾಡಿ ಬಳಿಕ ತೆರಳಿದರು.
ರಜನಿಕಾಂತ್ ಪ್ರಸಿದ್ಧ ನಟರಾಗುವುದಕ್ಕೂ ಮುನ್ನ ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಇಂದು ಅಲ್ಲಿಗೆ ಭೇಟಿ ನೀಡಿ ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು. ಈ ಹಿಂದೆ ಕೂಡ ರಜನೀಕಾಂತ್ ಹಲವು ಸಂದರ್ಶನಗಳಲ್ಲಿ ಬಿಎಂಟಿಸಿ ನನಗೆ ಅನ್ನ ಹಾಕಿದ ಅದರ ಮೇಲೆ ನನ್ನ ಋಣವಿದೆ. ಪ್ರತೀದಿನ ನಾನು ಬಿಎಂಟಿಸಿಯನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
ರಜನಿಕಾಂತ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಕಥೆಯೇ ಒಂದು ರೋಚಕ. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ಅವರು ಸಿನೆಮಾ ಕ್ಷೇತ್ರಕ್ಕೆ ಹೋಗಲು ಅವರ ಸ್ನೇಹಿತ ಬಸ್ ಚಾಲಕ ರಾಜ್ ಬಹದ್ದೂರ್ ಪ್ರಮುಖ ಪ್ರೇರಣೆ ಹೀಗಾಗಿ ೨೦೨೧ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ತನ್ನ ಸ್ನೇಹಿತನಿಗೆ ಅರ್ಪಣೆ ಮಾಡಿ ಗಮನ ಸೆಳೆದಿದ್ದರು.
ಯಾರಿಗೂ ಕೂಡ ತಿಳಿಸದೆ ತಾನು ಬೆಂಗಳೂರು ಭೇಟಿಗೆ ಬಂದಿರುವ ನಟ ರಜನೀಕಾಂತ್. ತಾನು ಕಂಡಕ್ಟರ್ ಆಗಿದ್ದ ದಿನಗಳನ್ನು ನೆನಪು ಮಾಡಿಕೊಂಡರು. ಸಿಬ್ಬಂದಿಗಳು ತಲೈವಾ ಜೊತೆಗೆ ಫೋಟೋ ತೆಗೆಸಿಕೊಂಡರು. ಜೊತೆಗೆ ಅವರ ಆಶೀರ್ವಾದ ಪಡೆದರು. ಈ ಮೊದಲು ರೂಟ್ ನಂಬರ್ ೧೦ ಡಿಪೋ ನಂ ೪ ರಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಜನಿಕಾಂತ್.
