Saturday, April 19, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳಿಗೆ ಶರಣರ ವಚನಗಳ ಅರಿವು ಮೂಡಿಸುವ ಕೆಲಸವಾಗಬೇಕು-ಡಾ.ಹೆಳವರಹುಂಡಿ ಸಿದ್ದಪ್ಪ

ವಿದ್ಯಾರ್ಥಿಗಳಿಗೆ ಶರಣರ ವಚನಗಳ ಅರಿವು ಮೂಡಿಸುವ ಕೆಲಸವಾಗಬೇಕು-ಡಾ.ಹೆಳವರಹುಂಡಿ ಸಿದ್ದಪ್ಪ

ಪಿರಿಯಾಪಟ್ಟಣ: ಶರಣರ ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ ತಿಳಿಸಿದರು. ಪಟ್ಟಣದ ಕಂಠಿತಮ್ಮಯ್ಯ ಸುಬ್ಬಮ್ಮ ಬಸವಮಂದಿರದಲ್ಲಿ ತಾಲೂಕು ಶರಣ ಸಾಹಿತ್ಯಪರಿಷತ್ ವತಿಯಿಂದ ನಡೆದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಶರಣ ಪರಂಪರೆ ತತ್ವಗಳು ವಚನಗಳು ಜಗತ್ತಿಗೆ ನೀಡಿದ ಸಂದೇಶಗಳು ಎಲ್ಲಡೆ ರವಾನೆಯಾಗಬೇಕು ಎಂಬ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ ಅನ್ನು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸ್ಥಾಪಿಸಿದರು.

ಇದರ ಸದಸ್ಯತ್ವವನ್ನು ಪ್ರತಿಯೊಬ್ಬರು ಪಡೆದು ತಾಲೂಕು ಮತ್ತು ಹೋಬಳಿ ಹಂತದಲ್ಲಿ ಅಧ್ಯಕ್ಷರು ಪದಾಧಿಕಾರಿಗಳನ್ನು ರಚನೆ ಮಾಡಿ ವಿದ್ಯಾರ್ಥಿಗಳಿಗೆ ಶರಣರ ವಚನಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಸಾಹಿತ್ಯ ಕಲಾಕೂಟದ ಅಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ ಶರಣ ಸಾಹಿತ್ಯ ಪರಿಷತ್ ದತ್ತಿನಿಧಿಗಳ ಆಶ್ರಯದಲ್ಲಿ ಹೆಚ್ಚು ಬೆಳೆದು ನಿಂತಿದೆ ಸಾವಿರಕ್ಕು ಹೆಚ್ಚು ದತ್ತಿನಿಧಿಗಳಿದ್ದು ವರ್ಷಪೂರ್ತಿ ಈ ದತ್ತಿನಿದಿಗಳಿಂದ ಬಂದ ಹಣದಲಿ ಕಾರ್ಯಕ್ರಮ ಮಾಡಲಾಗುತ್ತಿದೆ, ತಾಲೂಕು ಹಂತದಲ್ಲಿಯು ಶರಣ ಸಾಹಿತ್ಯ ಪರಿಷತ್ತಿಗೆ ದತ್ತಿನಿಧಿ ನೀಡುವ ಮೂಲಕ ಶರಣ ಸಾಹಿತ್ಯದ ಪ್ರಸಾರಕ್ಕೆ ಕೈ ಜೋಡಿಸಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಕಂದೇಗಾಲ ಚಂದ್ರಶೇಖರಯ್ಯ ಅವರು ಮಾತನಾಡಿ ಶರಣರ ಸಾಹಿತ್ಯ ವಚನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕಾರ್ಯ ಶ್ಲಾಘನೀಯ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಶಿವಯೋಗ ಅವರು ಮಾತನಾಡಿ ಯಾವುದೆ ರಾಜಕೀಯ ಪಕ್ಷಗಳ ಹಿಂದೆ ಸಂಘಟನೆ ಹೋಗುವ ಪ್ರಶ್ನೆಯಿಲ್ಲ ಕೇವಲ ಶರಣರ ವಚನ ಆದರ್ಶಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು, ಪಟ್ಟಣದಲ್ಲಿ ಜೆಎಸ್‌ಎಸ್ ಮಠಕ್ಕೆ ಸೇರಿದ ಆಸ್ತಿಯಿದ್ದು ಇದರಲ್ಲಿ ಭವನ ನಿರ್ಮಾಣ ಮಾಡಿದರೆ ಶರಣ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗಲಿದೆ ಎಂದರು.
ಈ ವೇಳೆ ಬೆಟ್ಟದಪುರ ಹೋಬಳಿ ಅಧ್ಯಕ್ಷರಾಗಿ ಕೂರಗಲ್ಲು ಶಿವಕುಮಾರ್, ಹಾರನಹಳ್ಳಿ ಹೋಬಳಿ ಅಧ್ಯಕ್ಷರಾಗಿ ಎಚ್.ಸಿ ಸದಾಶಿವ, ಕಸಬಾ ಹೋಬಳಿ ಅಧ್ಯಕ್ಷರಾಗಿ ಎಸ್.ಎಲ್ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಮಲ್ಲಿಕಾರ್ಜುನ್, ತಾಲೂಕು ಉಪಾಧ್ಯಕ್ಷರಾಗಿ ಕಣಗಾಲು ಕುಮಾರಶೆಟ್ಟಿ, ನಿವೃತ್ತ ಶಿಕ್ಷಕ ಎಂ.ಎನ್ ಮಲ್ಲಪ್ಪ ಅಧಿಕಾರ ಸ್ವೀಕರಿಸಿದರು. ಎಂಬುದು ಸಂಘಟನೆಗೆ ಒತ್ತು ನೀಡುವಂತೆ ತಿಳಿಸಿದರು.
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ನವೀನ್‌ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಬಿ.ಮುಖೇಶ್‌ ಕುಮಾರ್, ಮುಖಂಡರಾದ ಶಿವಪುತ್ರ, ಮರದೂರು ಮಹದೇವ್, ಪಂಚಾಕ್ಷರಿ, ವಿದ್ಯಾಶಂಕರ್, ಕಲ್ಲೇಶ್, ಗಗನ್ ಮತ್ತಿತರಿದ್ದರು.

RELATED ARTICLES
- Advertisment -
Google search engine

Most Popular