Saturday, April 19, 2025
Google search engine

Homeರಾಜ್ಯಸುದ್ದಿಜಾಲಕೃಷಿ ಪತ್ತಿನ ಸಹಕಾರ ಸಂಘ:ನೂತನ ನಿರ್ದೇಶಕರುಗಳ ಆಯ್ಕೆ

ಕೃಷಿ ಪತ್ತಿನ ಸಹಕಾರ ಸಂಘ:ನೂತನ ನಿರ್ದೇಶಕರುಗಳ ಆಯ್ಕೆ

ಕೆ.ಆರ್.ನಗರ: ತಾಲೂಕಿನ ತಿಪ್ಪೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಮಂಗಳವಾರ ಸಂಘದ ಆಡಳಿತ ಕಛೇರಿಯಲ್ಲಿ ಚುನಾವಣೆ ನಡೆಯಿತು. ಸಾಮಾನ್ಯ ಕ್ಷೇತ್ರದಿಂದ ಡಿ.ಕೆ.ಕರೀಗೌಡ(೩೮೫), ಡಿ.ಎನ್.ವಿಷಕಂಠೇಗೌಡ(೩೦೯), ತಿಮ್ಮಪ್ಪ(೩೦೬), ಕೆ.ಮಹದೇವ್(೩೦೩), ಗೌರಮ್ಮ(೨೯೧), ಹಿಂದುಳಿದ ವರ್ಗ ಬಿ ಕೆ.ಆರ್.ರಮೇಶ್(೩೧೪), ಪರಿಶಿಷ್ಟ ಪಂಗಡ ಭೀಮಪ್ಪ(೩೪೭), ಸಾಲಗಾರರಲ್ಲ ಕ್ಷೇತ್ರದಿಂದ ಟಿ.ಜೆ.ವಿಶ್ವನಾಥ್(೧೩೩) ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಎನ್.ಕೃಷ್ಣಮೂರ್ತಿ, ಹಿಂದುಳಿದ ವರ್ಗ-ಎ ಎಸ್.ಸಿದ್ದೇಗೌಡ, ಮಹಿಳಾ ಮೀಸಲಾತಿಯಿಂದ ಮಣಿಯಮ್ಮ, ನಿಂಗಾಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಹಕಾರ ಇಲಾಖೆಯ ಎಸ್.ರವಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸಂಘದ ಸಿಇಒ ಮಹದೇವ್ ಇದ್ದರು.
ಎಸ್.ಸಿದ್ದೇಗೌಡ ಮಾತನಾಡಿ ೯ ಬಾರಿ ನಮ್ಮ ತಂಡಕ್ಕೆ ರೈತ ಸದಸ್ಯರು ಮತ ನೀಡುವ ಮೂಲಕ ಆಯ್ಕೆ ಮಾಡುತ್ತಾ ಬಂದಿದ್ದಾರೆ ಅದಕ್ಕಾಗಿ ಅವರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಸಿದ್ದೇಗೌಡ ಸಂಘದ ಆಡಳಿತ ಮಂಡಳಿ ರೈತರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೆಲಸ ಮಾಡುವುದರ ಜತೆಗೆ ಸಂಘದ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ರೈತ ಮುಖಂಡರು ನೂತನ ಆಡಳಿತ ಮಂಡಳಿಯ ನಾಯಕರಾದ ಎಸ್.ಸಿದ್ದೇಗೌಡ ಮತ್ತು ಇತರ ನಿರ್ದೇಶಕರನ್ನು ಅಭಿನಂದಿಸಿದರು. ತಿಪ್ಪೂರು ಗ್ರಾ.ಪಂ. ಅಧ್ಯಕ್ಷ ಮಧು, ಹೊಸಹಳ್ಳಿ ವಿಎಸ್‌ಎಸ್‌ಎನ್ ಸಿಇಒ ಗಿರೀಶ್, ನಿರ್ದೇಶಕರಾದ ಜಯಣ್ಣ, ರಮೇಶ್(ಗುಡಪ್ಪ), ಬ್ಯಾಡರಹಳ್ಳಿ ವಿಎಸ್‌ಎಸ್‌ಎನ್ ಸಿಇಒ ಸಚಿನ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ್, ಮುಖಂಡರಾದ ಡಿ.ಜೆ.ಮಹದೇವ್, ಪ್ರೇಮಕುಮಾರ್, ಗಂಗಾಧರ್, ಮಂಜುನಾಥ್, ತಿಪ್ಪೂರುರವಿ, ದಿನೇಶ್, ಸಂತೋಷ್, ಗೌರೀಶ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular