ನಂಜನಗೂಡು: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ಆವರಣದ ಕಾಂಪೌಂಡುಗಳನ್ನೇ ಭಕ್ತಾದಿಗಳು ಶೌಚಾಲಯ ಮಾಡಿಕೊಂಡಿದ್ದಾರೆ.
ಶೌಚಾಲಯ ಕಟ್ಟಿ ಮೂರು ವರ್ಷವಾದರೂ ಭಕ್ತಾದಿಗಳ ಉಪಯೋಗಕ್ಕೆ ಬಾರದೆ ಬೀಗ ಜಡಿದಿರುವ ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಈ ಸಂಬಂದ ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಶರ್ಮ ಮಾತನಾಡಿ, ಮೂರು ವರ್ಷದ ಹಿಂದೆ ಕಟ್ಟಿರುವ ನೂತನ ಶೌಚಾಲಯ ಭಕ್ತಾದಿಗಳ ಉಪಯೋಗಕ್ಕೆ ನೀಡದ ಕಾರಣ ಅನೈತಿಕ ಚಟುವಟಿಕೆ ತಾಣವಾಗಿದೆ. ಜೊತೆಗೆ ಶೌಚಾಲಯದ ಕೊರತೆ ಉಂಟಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಂಡು ಶೌಚಾಲಯವನ್ನು ಅನೈತಿಕ ಚಟುವಟಿಕೆಗಳಿಂದ ಮುಕ್ತಗೊಳಿಸಿ ಭಕ್ತಾದಿಗಳ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
