ಗದಗ: ಗೃಹ ಲಕ್ಷ್ಮೀ ಯೋಜನೆ ಜಾರಿ ಹಿನ್ನೆಲೆ ಲಂಬಾಣಿ ಗೃಹ ಲಕ್ಷ್ಮೀಯರು ಖುಷಿಯಿಂದ ಕುಣಿದು ಸಂಭ್ರಮಿಸಿದ್ದು, ಸಿಎಂ ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹಾಡಿನ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಗದಗ ನಗರದ ಭೀಮ ಸೇನ ಜೋಶಿ ರಂಗಮಂದಿರ ಎದುರು ಕಾರ್ಯಕ್ರಮಕ್ಕೂ ಮುನ್ನ ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು ಲಮಾಣಿ ನೃತ್ಯ ಮಾಡಿದ್ದಾರೆ.
ಸಚಿವ ಎಚ್ ಕೆ ಪಾಟೀಲ, ರಾಹುಲ್ ಗಾಂಧಿ, ಸರ್ಕಾರಕ್ಕೆ ಅವರಿಗೆ ಲಂಬಾಣಿ ಭಾಷೆಯಲ್ಲಿ ಹಾಡು ಹಾಡಿ ಧನ್ಯವಾದ ಅರ್ಪಿಸಿದ್ದಾರೆ.
ಬಡವರಿಗೆ ನೆರವಾದ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಗಂಡ, ತವರು ಮನೆಯವರೂ ನೋಡ್ಲಿಲ್ಲ. ಸರ್ಕಾರ ಹಣ ಕೊಡ್ತಿದೆ. ಗೃಹ ಲಕ್ಷ್ಮೀ ಯೋಜನೆ ಜಾರಿಯಾಗುತ್ತೆ ಅಂತಾ ಬೆಳಗ್ಗೆಯೇ ರೆಡಿಯಾಗಿ ಬಂದಿದ್ದೇವೆ. ಸಂತೋಷದಿಂದ ಹಾಡಿ, ಡ್ಯಾನ್ಸ್ ಮಾಡಿ ಖುಷಿ ಪಡ್ತಿದಿವಿ. ಮಕ್ಕಳ ಶಿಕ್ಷಣ ಕೊಡಸ್ತೀವಿ. ಹಬ್ಬ ಮಾಡ್ತಿವಿ, ಸಂಜೆವರೆಗೂ ಡ್ಯಾನ್ಸ್ ಮಾಡ್ತೀವಿ. ಇನ್ಮುಂದೆ ಸಂತೋಷದಿಂದ ಜೀವನ ಮಾಡ್ತೀವಿ ಎಂದು ಮಹಿಳೆಯರು ತಿಳಿಸಿದ್ದಾರೆ.