Sunday, April 20, 2025
Google search engine

Homeರಾಜ್ಯಸುದ್ದಿಜಾಲಮಹಿಳೆಯರೇ ಕರ್ನಾಟಕದ ಶಕ್ತಿ: ರಾಹುಲ್ ಗಾಂಧಿ

ಮಹಿಳೆಯರೇ ಕರ್ನಾಟಕದ ಶಕ್ತಿ: ರಾಹುಲ್ ಗಾಂಧಿ

ಮೈಸೂರು: ಕರ್ನಾಟಕದ ಶಕ್ತಿ ಮಹಿಳೆಯರು. ಈ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ೫ ಗ್ಯಾರೆಂಟಿ ಪೈಕಿ ೪ ಯೋಜನೆಗಳನ್ನು ಮೀಸಲಿಟ್ಟಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಕ್ಷಾ ಬಂಧನ ದಿನದಂದು ನಾವು ಮಹಿಳೆಯರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣೆ ವೇಳೆ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿದ್ದೇವೆ. ಆ ಯೋಜನೆಯನ್ನು ನಾವು ಶಕ್ತಿ ಯೋಜನೆ ಎಂಬ ಹೆಸರಿನಲ್ಲಿ ಜಾರಿಗ ತಂದಿದ್ದೇವೆ. ಇಂದು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂದು ಅನ್ನಭಾಗ್ಯ ಯೋಜನೆಯಡಿ ೧೦ಕೆಜಿ ಅಕ್ಕಿ ಕೊಡುವ ಯೋಜನೆಯನ್ನೂ ಜಾರಿಗೆ ತಂದಿದ್ದೇವೆ. ಇನ್ನು ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆ. ನೀವು ೫ ಯೋಜನೆ ಪೈಕಿ ೪ ಯೋಜನೆ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜ್ಯದಲ್ಲಿನ ನಿರುದ್ಯೋಗ ಯುವಕರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಹೊರತು ಪಡಿಸಿ ಇನ್ನುಳಿದ ೪ ಯೋಜನೆಗಳು ಮಹಿಳೆಯರಗಾಗಿ ರೂಪಿತಗೊಂಡ ಯೋಜನೆಯಾಗಿದೆ. ಇದರ ಹಿಂದೆ ಆಳವಾದ ಒಂದು ಯೋಚನೆ ಇದೆ. ದೊಡ್ಡ ಮರ ಬೇರಿಲ್ಲದಿದ್ದರೆ ನಿಲ್ಲಲು ಸಾಧ್ಯವಿಲ್ಲ. ಬುಡ ಸದೃಢವಾಗಿದ್ದರೆ ಯಾವುದೇ ಬಿರುಗಾಳಿ, ಮಳೆ ಬಂದರೆ ಮರವನ್ನು ಬೀಳಿಸಲು ಸಾಧ್ಯವಿಲ್ಲ. ಇವತ್ತು ವಿಶಾಲವಾದ ಕಟ್ಟಡ ಕಟ್ಟಲು ಅಡಿಪಾಯ ಉತ್ತಮವಾಗಿರಬೇಕು. ಏಷ್ಟು ಉತ್ತಮ ಅಡಿಪಾಯ ಹಾಕುತ್ತೇವೆ ಅಷ್ಟೇ ಉತ್ತಮ ಕಟ್ಟಡ ಕಟ್ಟಲು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ

ಭಾರತ್ ಜೋಡೋ ಯಾತ್ರೆಯಲ್ಲಿ ಸಹಸ್ರಾರು ಮಹಿಳೆಯರನ್ನು ಭೇಟಿ ಮಾಡಿ ಮಾತನಾಡಿಸಿದ್ದೇವೆ. ಕರ್ನಾಟಕದಲ್ಲಿ ಸರಿಸುಮಾರು ೬೦೦ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇವೆ. ಈ ಪಾದಯಾತ್ರೆ ವೇಳೆ ನನಗೆ ಒಂದು ವಿಚಾರ ಮನಸ್ಸಿಗೆ ಮುಟ್ಟಿದೆ. ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ನಾವು ಹೈರಾಣಿಗಿದ್ದೇವೆ ಅನ್ನೋ ನಿಮ್ಮ ಮಾತು ನನ್ನ ಮನಸ್ಸಿಗೆ ಮುಟ್ಟಿದೆ. ಬೆಲೆ ಏರಿಕೆ ಹೊರೆಯಿಂದ ನಾವು ಸಂಕಷ್ಟದಲ್ಲಿದ್ದೇವೆ ಎಂದು ಸಾವಿರಾರು ಮಹಿಳೆಯರು ಹೇಳಿದ್ದರು.

ಕೇಂದ್ರದಲ್ಲಿರುವ ಸರ್ಕಾರ ಕೋಟಿ ಪತಿಗಳಿಗೆ ಸಹಕಾರ ನೀಡುವ ಸರ್ಕಾರವಾಗಿದೆ. ಕೇಂದ್ರದ ಆಪ್ತರರಾಗಿರುವ ಇಬ್ಬರಿಂದ ಮೂವರಿಗೆ ಲಾಭ ಸಿಗುತ್ತಿದೆ. ಎಲ್ಲಾ ಯೋಜನೆಗಳ ಅವರಿಗೆ ಸಿಗುತ್ತಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕರ್ನಾಟಕದಲ್ಲಿ ಕೊಟ್ಟಿರುವ ೫ ಭರವಸೆಗಳು ರಾಜ್ಯದ ನೀಲಿ ನಕ್ಷೆಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಇಷ್ಟು ದೊಡ್ಡ ಹಣ ನೀಡುತ್ತಿರೋದು ಇದೇ ಮೊದಲು. ನಾವು ಕೊಟ್ಟ ಅಶ್ಚಾಸನೆ ಕೊಟ್ಟ ಭರವಸೆ ಈಡಿರಿಸಿದ್ದೇವೆ. ರಾಜ್ಯ ಏಳಿಗೆ ಯಾರಾದರು ಕಾರಣರಾದರೆ ಅದು ಮಹಿಳೆಯರಿಂದಲೇಸಾಧ್ಯ ಎಂದು ರಾಹುಲ್ ಗಾಂಧಿಹೇಳಿದ್ದಾರೆ. ನಾವು ಸುಳ್ಳು ಅಶ್ವಾಸನೆ ಕೊಡೋದಿಲ್ಲ.. ಸಾಧ್ಯವಾಗದಿದ್ದರೆ ನಿಮ್ ಮುಂದೆ ಹೇಳ್ತೀವಿ.. ಅದು ಸಾಧ್ಯವಾಗುತ್ತೆ ಅನ್ನೋದ್ ಆದ್ರೆ ಮಾಡೇ ಮಾಡುತ್ತೇವೆ. ಇದು ಬಂಡವಾಳ ಶಾಹಿಗಳಿಗೋಸ್ಕರ ಮಾಡಿರುವ ಯೋಜನೆ ಅಲ್ಲ..ಮಹಿಳೆಯರಿಗೆ ಮಾಡಿರುವ ಯೋಜನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular