Monday, April 21, 2025
Google search engine

Homeಸಿನಿಮಾರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ರಕ್ಷಾಬಂಧನ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ರಕ್ಷಾಬಂಧನ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಈ ವರ್ಷ ರಕ್ಷಾಬಂಧನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಮಕ್ಕಳಿಬ್ಬರ ಮುದ್ದಾದ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಈ ವರ್ಷ ರಕ್ಷಾಬಂಧನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಇಬ್ಬರೂ ಕೂಡ ಪಿಂಕ್, ಹಳದಿ ಕೆಂಪು ಬಣ್ಣ ಮಿಶ್ರಿತ ಧಿರಿಸಿನಲ್ಲಿ ಮಿಂಚಿದ್ದಾರೆ. ಅಕ್ಕ ಆಯ್ರಾ ತಮ್ಮ ಯಥರ್ವ್‌ಗೆ ಆರತಿ ಮಾಡಿ, ತಿಲಕವಿಟ್ಟು ರಾಖಿ ಕಟ್ಟಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಈ ಬಗ್ಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ಕೆಲವೊಮ್ಮೆ ಸಹಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು ಇರುತ್ತಾರೆ. ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಇನ್ನು ಪ್ರತೀವರ್ಷದಂತೆ ಕೂಡ ಈ ವರ್ಷ ರಾಕಿ ಹಬ್ಬವನ್ನು ಆಚರಿಸಲಾಗಿದೆ. ರಾಖಿ ಹಬ್ಬವೆಂದರೆ ಸಹೋದರರಿಗಾಗಿ ಸಹೋದರಿಯರು ಮೀಸಲಿಟ್ಟ ದಿನವಾಗಿದೆ. ರಾಧಿಕಾ ಪಂಡಿತ್ ಸಹೋದರ ಗೌರಂಗ್ ವಿದೇಶದಲ್ಲಿ ಕೆಲಸದಲ್ಲಿದ್ದಾರೆ. ಯಶ್ ಅವರ ಸಹೋದರಿ ನಂದಿನಿ ಕೂಡ ಪ್ರತೀ ವರ್ಷ ರಾಖಿ ಹಬ್ಬವನ್ನು ಅಣ್ಣ ಯಶ್ ಗೆ ರಾಖಿ ಕಟ್ಟಿ ಆಚರಿಸುತ್ತಾರೆ.

RELATED ARTICLES
- Advertisment -
Google search engine

Most Popular