ಚಾಮರಾಜನಗರ : ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ೧೨ ವರ್ಷದೊಳಗಿನವರ ವಿಭಾಗದವರಿಗೆ ಹೈದರಾಬಾದ್‌ನ ಆಶ್ ಅಕಾಡೆಮಿ ನಡೆಸಿದ ರಾಷ್ಟ್ರೀಯ ಸರಣಿಯಲ್ಲಿ ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಪದ್ಮಪ್ರಿಯಾ ರಮೇಶ್ ಕುಮಾರ್ ಡಬಲ್ಸ್ನಲ್ಲಿ ಪ್ರಥಮ ಮತ್ತು ಸಿಂಗಲ್ಸ್ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭಾಗಗಳಿಂದ (ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ) ಸುಮಾರು ೪೮ ಟೆನಿಸ್ ಆಟಗಾರರು (ಬಾಲಕಿಯರ ವಿಭಾಗ) ಭಾಗವಹಿಸಿದ್ದರು. ಪದ್ಮಪ್ರಿಯಾ ರಮೇಶ್ ಕುಮಾರ್ ಅವರು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮತ್ತು ಮೈಸೂರಿನ ಅರಣ್ಯ ಇಲಾಖೆಯ ಕಾರ್ಯನಿರ್ವಹಣೆ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ. ರಮೇಶ್‌ಕುಮಾರ್ ಅವರ ಪುತ್ರಿ.