ಗದಗ: ಬೆಳೆಗಳಿಗೆ ನೀರು ಬಿಡದ ಹಿನ್ನೆಲೆ ಅಧಿಕಾರಿಗಳನ್ನು ಗ್ರಾಮಪಂಚಾಯಿತಿ ಕೊಠಡಿಯಲ್ಲಿ ರೈತರು ಕೂಡಿ ಹಾಕಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ನಡೆದಿದೆ.
ಸಮರ್ಪಕ ಮಳೆ ಬಾರದ ಹಿನ್ನೆಲೆ ರೈತರು ಬೆಳೆದ ಬೆಳೆಗಳೆಲ್ಲ ನಾಶವಾಗಿದೆ. ಜಿಲ್ಲೆಯಲ್ಲಿ ಕೋಟಿ ವೆಚ್ಚದಲ್ಲಿ ಹನಿ ನಿರಾವರಿ ಅಳವಡಿಕೆ ಮಾಡಲಾಗಿದೆ. ಆದರೆ ಹಲವಾರು ವರ್ಷಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ.

ಇದೀಗ ಕಾಲುವೆ ಅಥವಾ ಹನಿ ನೀರಾವರಿ ಮೂಲಕ ನೀರು ಹರಿಸುವಂತೆ ರೈತರು ಅಗ್ರಹಿಸಿದ್ದಾರೆ.
ನೇಟಾಫೆಮ್ ಹಾಗೂ ಮೇಗಾ ಕಂಪನಿಯಿಂದ ಹನಿ ನೀರಾವರಿ ಅನುಷ್ಠಾನ ಮಾಡಲಾಗಿದ್ದು, ಶಿಂಗಟಾಲೂರು ಏತ ನೀರಾವರಿ ಶಾಖಾಧಿಕಾರಿ ಮಹಾಂತೇಶ ನೆಗಳೂರು ಹಾಗೂ ಹನಿ ನೀರಾವರಿ ಇಲಾಖೆ ಸಿಬ್ಬಂದಿಗಳನ್ನು ಕರೆಯಿಸಿದ ರೈತವರ್ಗ ಗ್ರಾಮ ಪಂಚಾಯತಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ಸ್ಥಳಕ್ಕೆ ಮೇಲಾಧಿಕಾರಿಗಳು ಬಂದು ನೀರು ಬಿಡುವರೆಗೂ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ರೈತರ ಆಗ್ರಹಿಸಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.