Tuesday, April 22, 2025
Google search engine

Homeರಾಜ್ಯಜೆ.ಎಸ್.ಎಸ್. ಸಂಶೋಧನ ಕೇಂದ್ರ: ಗಾಯತ್ರಿ ಕುಲಕರ್ಣಿ ಅವರಿಗೆ ಪಿಎಚ್.ಡಿ. ಪದವಿ

ಜೆ.ಎಸ್.ಎಸ್. ಸಂಶೋಧನ ಕೇಂದ್ರ: ಗಾಯತ್ರಿ ಕುಲಕರ್ಣಿ ಅವರಿಗೆ ಪಿಎಚ್.ಡಿ. ಪದವಿ

ಧಾರವಾಡ: ನಗರದ ಜೆ.ಎಸ್.ಎಸ್. ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರದ ಮೂಲಕ ಕನ್ನಡ ವಿಷಯದಲ್ಲಿ “ಕನ್ನಡ ಚಲನಚಿತ್ರ ಗೀತೆಗಳಲ್ಲಿ ಮಹಿಳಾ ಪ್ರತಿನಿಧೀಕರಣ” ಎಂಬ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಕುಲಕರ್ಣಿ ಗಾಯತ್ರಿ ಅವರ ಸಂಶೋಧನ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ. ಇವರಿಗೆ ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜನಾಧಿಕಾರಿ ಡಾ. ಜಿನದತ್ತ ಅ. ಹಡಗಲಿ ಅವರು ಮಾರ್ಗದರ್ಶಕರಾಗಿದ್ದರು. ಇವರನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular