ಮಂಡ್ಯ: ಎರಡು ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದ್ದು ವಡ್ಡರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಡ್ಡರಹಳ್ಳಿ ಹಾಗೂ ಹೆಗ್ಗಡಹಳ್ಳಿ ಗ್ರಾಮಸ್ಥರ ನಡುವೆ ಕೆರೆ ಒತ್ತುವರಿ ವಿಚಾರಕ್ಕೆ ಜಗಳವಾಗಿದ್ದು ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ವಡ್ಡರಹಳ್ಳಿ ಗ್ರಾಮದ 23 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿರುವ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಅಭಿವೃದ್ಧಿಗಾಗಿ 75 ಲಕ್ಷ ರೂ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು ಕೆರೆಯ ತೆರವು ವಿಚಾರದಲ್ಲಿ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆ ಇಂದು ತಾಲೂಕು ದಂಡಾಧಿಕಾರಿ ನಿಸರ್ಗ ಪ್ರಿಯ ಸ್ಥಳ ಪರಿಶೀಲಿಸಿ ವಾಪಸ್ ಆಗಿದ್ದರು ನಂತರ ವಡ್ಡರಹಳ್ಳಿ ಹಾಗೂ ಹೆಗ್ಗಡಹಳ್ಳಿ ಎರಡು ಗ್ರಾಮಸ್ಥರು ಪರಸ್ಪರ ಕೈ-ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
