ಮಂಡ್ಯ: ಇಂದು ಕಾವೇರಿ ಹೋರಾಟಕ್ಕೆ ಜೆಡಿಎಸ್ ಕರೆ ನೀಡಿದ್ದು, ದಳಪತಿಗಳ ಹೋರಾಟದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಭಾಗಿಯಾಗಲಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಕಾವೇರಿ ಹೋರಾಟವನ್ನು ಹಮ್ಮಿಕೊಂಡಿದ್ದು, ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಸಂಜಯ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸಂಜಯ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ.
ಸಭೆ ಬಳಿಕ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದ ಕಾವೇರಿ ಹೋರಾಟಕ್ಕೆ ಸಾಥ್ ನೀಡಲಿದೆ.
ಹೆಚ್.ಡಿ.ದೇವೇಗೌಡ ಕಾವೇರಿ ಹೋರಾಟದ ಹಿಂದೆ ರಾಜಕೀಯ ಲೆಕ್ಕಾಚಾರ ಇದೆಯೇ ಎಂಬ ಪ್ರಶ್ನೆ ಈಗಾಗಲೇ ಉದ್ಭವವಾಗಿದ್ದು, ಕಾವೇರಿ ಹೋರಾಟದ ನೆಪದಲ್ಲಿ ಜಿಲ್ಲೆಯ ಜನರ ಮಗ ಗೆಲ್ಲುವ ಯತ್ನ ನಡೆಸಲಾಗುತ್ತಿದೆ.
ಸಕ್ಕರೆನಾಡಿನ ಜನರ ವಿಶ್ವಾಸ ಗೆಲ್ಲಲು ದಳಪತಿಗಳು ಕಾವೇರಿ ಅಸ್ತ್ರ ಬಳಸಿದ್ರಾ ಎಂಬ ಮಾತು ಕೇಳಿಬರುತ್ತಿದ್ದು, ಜಿಲ್ಲೆಯ ರೈತರು, ಜನರ ಪರ ನಿರಂತರ ಜೊತೆ ಇದ್ದೀನಿ ಎಂದು ತೋರಿಸುವ ಮೂಲಕ ವಿಧಾನಸಭೆಯಲ್ಲಿ ಕಳೆದುಕೊಂಡಿದ್ದನ್ನು ಲೋಕಸಭೆಯಲ್ಲಿ ಗಳಿಸುವ ಪ್ಲಾನ್ ಮಾಡಲಾಗಿದೆ. ದೊಡ್ಡಗೌಡರ ಕಾವೇರಿ ಅಸ್ತ್ರಕ್ಕೆ ಮಂಡ್ಯ ಜನ ಕರಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.