ಮಂಡ್ಯ: ಜಮೀನು ಕಳೆದುಕೊಂಡ ರೈತನಿಗೆ ಪರಿಹಾರ ಹಣ ಕೊಡದ ಹಿನ್ನಲೆ ಪಾಂಡವಪುರದ ಎ.ಸಿ ಕಚೇರಿ ಮತ್ತು ಪುರಸಭೆ ಕಚೇರಿಯ ಚರಾಸ್ತಿ ಜಪ್ತಿಗೆ ಪಾಂಡವಪುರದ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದ್ದು, ಅದರಂತೆ ಕಚೇರಿಯ ಪೀಠೋಪಕರಣಗಳು ಮತ್ತು ವಾಹನ ಜಪ್ತಿ ಮಾಡಲಾಗಿದೆ.
ರೈತನೊಂದಿಗೆ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿಗಳಿಂದ ಜಪ್ತಿ ಮಾಡಿದ್ದಾರೆ.
ಪಟ್ಟಣದ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಕ್ಕೆ 30 ಗುಂಟೆ ಭೂಮಿ ಕಳೆದು ಕೊಂಡಿದ್ದ ರೈತ ಸತ್ಯನಾರಾಯಣ ಎಂಬುವರಿಗೆ 4.79 ಕೋಟಿ ಪರಿಹಾರ ಹಣ ನೀಡುವಂತೆ 2021 ರಲ್ಲಿ ಕೋರ್ಟ್ ಆದೇಶಿಸಿತ್ತು.
ಆದರೆ ಇದುವರೆಗೂ ರೈತನಿಗೆ ಪರಿಹಾರ ಹಣ ಕೊಡದ ಕಾರಣಕ್ಕೆ ಎರಡು ಕಚೇರಿ ಜಪ್ತಿಗೆ ಕೋರ್ಟ್ ಆದೇಶಿಸಿದೆ.