ಮಂಡ್ಯ: ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಅಸಡ್ಡೆ ಇದೆ. ತಮಿಳುನಾಡಿನ ಜೊತೆ ಓಲೈಕೆ ರಾಜಕಾರಣ ಮಾಡ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಕುಮಾರಸ್ವಾಮಿ ಆರೋಗ್ಯಕ್ಕಾಗಿ ಪೂಜೆ ಸಲ್ಲಿಕೆ ಮಾಡಲಾಗಿದೆ.
ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನ್ಯಾಯ ಆಗ್ತಿದೆ. ರಾಜ್ಯ-ಕೇಂದ್ರದ ವಿರುದ್ಧ ನಾವು ಬೃಹತ್ ಹೋರಾಟ ಮಾಡ್ತಿದ್ದೇವೆ. ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತು ನೀರು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿಗೆ ನೀರು ತಲುಪವವರೆಗೆ ವಿಚಾರಣೆ ಮೂಂದುಡೂತ್ತಾರೆ. ಲೋಕಸಭಾ ಚುನಾವಣಾ ಗಮನದಲ್ಲಿಟ್ಟುಕೊಂಡು ಓಲೈಕೆ ರಾಜಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಸರ್ಕಾರಕ್ಕೆ ರೈತರ ಹಿತ ಮುಖ್ಯ ಇಲ್ಲ. ಅಧಿಕಾರದ ಆಸೆ ಮುಖ್ಯ ಎಂದು ಹರಿಹಾಯ್ದಿದ್ದಾರೆ.
ಕಾವೇರಿಗಾಗಿ ನಮ್ಮ ಹೋರಾಟ ನಿರಂತರವಾಗಿ ಇರುತ್ತೆ. ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಹೊಗ್ತಿದೆ. ನಮಗೆ ನೀರಿಲ್ಲ ಹೇಗೆ ನೀರು ಬಿಡೋದು.? ಸುಗ್ರಿವಾಜ್ಞೆ ತಂದು ನೀರು ಬಿಡಲ್ಲ ಅಂತ ಹೇಳಬೇಕು. ಭ್ರಷ್ಟಾಚಾರ ಮಾಡೋದ್ರಲ್ಲಿ ಸರ್ಕಾರ ಇದೆ. ಅಧಿಕಾರದಲ್ಲಿರುವ ಶಾಸಕರು ಚಳವಳಿ ಮಾಡಬೇಕು. ಈಗಿನ ಶಾಸಕರು ಬರಿ ವಿಡಿಯೋ ಗೆ ಮಾತ್ರ ಸಿಮಿತರಾಗಿದ್ದಾರೆ. ಡಿಸೆಂಬರ್ ಗೆ ಕುಡಿಯಲು ನೀರು ಸಿಗಲ್ಲ. ಕೀ ಇವರ ಬಳಿ ಇದೆ ಸುಳ್ಳು ಹೇಳ್ತಿದ್ದಾರೆ ಅಷ್ಟೇ. ನಮ್ಮ ಹೋರಾಟ ನಿರಂತರವಾಗಿದ್ದು ನಮ್ಮ ಕುಮಾರಣ್ಣ ಅವರು ಕೂಡ ಮುಂದಿನ ದಿನ ಬರ್ತಾರೆ ಎಂದು ಹೇಳಿದರು.