Saturday, April 19, 2025
Google search engine

Homeರಾಜ್ಯಯುವತಿ, ಅಪ್ರಾಪ್ತ ವಯಸ್ಸಿನ ಬಾಲಕಿ ಕಾಣೆ: ಪತ್ತೆಗೆ ಕೋರಿಕೆ

ಯುವತಿ, ಅಪ್ರಾಪ್ತ ವಯಸ್ಸಿನ ಬಾಲಕಿ ಕಾಣೆ: ಪತ್ತೆಗೆ ಕೋರಿಕೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಪಡುಪಣಂಬೂರು ಬೆಳ್ಳ್ಳಾಯೂರು ಗ್ರಾಮದ ಕೊರ್ದಬ್ಬು ದೇವಸ್ಥಾನದ ಬಳಿ ವಾಸವಾಗಿದ್ದ ಹಸೀನಾ (25 ವರ್ಷ) ಮತ್ತು ಆಕೆಯ ಜೊತೆಗಿದ್ದ ಅಪ್ರಾಪ್ತ ವಯಸ್ಸಿನ ರಾಜಸ್ಥಾನ ಮೂಲದ ಅಪ್ರಾಪ್ತ ವಯಸ್ಸಿನ ಹುಡುಗಿ (17 ವರ್ಷ) ಆ.30ರಂದು ಕಾಣೆಯಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸೀನಾ ಚಹರೆ:

 ಎತ್ತರ 5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಕಾಣೆಯಾಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ.

ಅಪ್ರಾಪ್ತ ವಯಸ್ಸಿನ ಹುಡುಗಿ:

ಎತ್ತರ 5.1 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿರುತ್ತಾರೆ. ಕಾಣೆಯಾಗುವಾಗ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ಮಾರ್ವಾಡಿ ಭಾಷೆ ಮಾತನಾಡುತ್ತಾರೆ.

ಈ ಇಬ್ಬರು ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 0824-2290533, 9480805359, 9480805332 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ ಸಂಖ್ಯೆ:0824-2220800 ಗೆ ಕರೆ ಮಾಡಿ ಸಂಪರ್ಕಿಸುವಂತೆ ಮುಲ್ಕಿ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular