ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಪಿ.ಡಿ.ಜಿ ಕೊಪ್ಪಲು ಗ್ರಾಮದಲ್ಲಿ ಚಾಲಾಕಿ ಕಳ್ಳರ ಕೈಚಳಕಕ್ಕೆ, ಬಡ ರೈತ ಲೋಕೇಶ್ ಸೇರಿದ ೫ ಆಡುಗಳು(ಮೇಕೆ) ಕಳ್ಳತನವಾಗಿರುವ ಘಟನೆ ಜರುಗಿದೆ.
ಘಟನೆ ಕುರಿತು ಮಾತನಾಡಿದ ಪಿ.ಡಿ. ಜಿ ಕೊಪ್ಪಲು ಗ್ರಾಮದ ಮುಖಂಡ ಮತ್ತು ಗ್ರಾ.ಪಂ ಸದಸ್ಯ ಕುಮಾರ್ ನಮ್ಮ ಗ್ರಾಮದ ಬಡ ರೈತ ಲೋಕೇಶ್ ರವರಿಗೆ ಸೇರಿದ ೫ ಮೇಕೆಗಳು ಎಂದಿನಂತೆ ತಮ್ಮ ಹಳೆಯ ನಿವಾಸದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದ ಮೇಕೆಗಳನ್ನು ಶುಕ್ರವಾರ ಮಧ್ಯರಾತ್ರಿ ಮನೆಯ ಬೀಗ ಮುರಿದು ಜಾಣತನದಿಂದ ಕಳ್ಳರು ಕಳುವು ಮಾಡಿದ್ದಾರೆ ಕಳ್ಳತನ ಸಂದರ್ಭದಲ್ಲಿ ಮನೆಯವರು ಎಚ್ಚರಗೊಳ್ಳಬಹುದು ಎನ್ನುವ ಮುನ್ನ ಆಲೋಚನೆಯಿಂದ ಕೊಟ್ಟಿಗೆಯ ಸಮೀಪದಲ್ಲಿದ್ದ ಮೂರು ಮನೆಗಳ ಹೊರ ಭಾಗದಿಂದ ಬಾಗಿಲಿಗೆ ಲಾಕ್ ಹಾಕಿ ಅಪರಿಸಿದ್ದಾರೆ.
ಈ ಘಟನೆಯಿಂದ ಒಂದು ಲಕ್ಷದ ಐವತ್ತು ಸಾವಿರ ಕ್ಕೂ ಹೆಚ್ಚು ನಷ್ಟ ಉಂಟಾಗಿದೆ, ಮಳೆಗಾಲ ಇಲ್ಲದ ಸಂದರ್ಭದಲ್ಲಿ ಈ ರಾಸುಗಳನ್ನೆ ಅವಲಂಬಿಸಿ ಬದುಕುತ್ತಿದ್ದ ಲೋಕೇಶ್ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಕೂಡಲೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಚುರುಕು ತನಿಖೆ ನಡೆಸಿಬೇಕು ಎಂದು ಗ್ರಾಮಸ್ಥ ಮನವಿ ಮಾಡಿದರು.
ಕಳ್ಳರ ಆಗಮನ ಸಿಸಿ ಕ್ಯಾಮರದಲ್ಲಿ ಸೆರೆ: ತಡ ರಾತ್ರಿಯ ಗ್ರಾಮಕ್ಕೆ ಅನುಮಾನಸ್ಪದ ಮಾರುತಿ ೮೦೦ ವಾಹನ ರಾತ್ರಿ ನಮ್ಮ ಗ್ರಾಮ ಬಂದಿರುವ ದೃಶ್ಯ ನಮ್ಮ ಗ್ರಾಮದ ಹೂ ಮಂಜೇಗೌಡರ ಮನೆಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಈ ವಾಹನವೇ ಕಳ್ಳರ ವಾಹನವಾಗಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದರು. ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
