ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಮಂಡ್ಯ ಜಿಲ್ಲೆಯಾದ್ಯಂತ ಕಾವೇರಿ ಹೋರಾಟ ತೀವ್ರವಾಗಿದ್ದು, ದರ್ಶನ್ ಪುಟ್ಟಣ್ಣಯ್ಯ-ರೈತರು ಕಾನೂನು ಹೋರಾಟಕ್ಕೆ ಮುಂದಾಗಿವೆ. ಈ ಸಂಬಂಧ ಇಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ದರ್ಶನ್ ಪುಟ್ಟಣ್ಣಯ್ಯಗೆ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಹೇಳ್ತೇನೆ ಎಂದಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಜೊತೆ ರೈತ ಮುಖಂಡರು ಸಹ ಕಾನೂನು ಹೋರಾಟಕ್ಕೆ ಇಳಿದಿರುವ ನಿರ್ದೇಶನ ಇದೆ. ನಮಗೆ ರೈತರ ಹಿತರಕ್ಷಣೆ ಮುಖ್ಯವಾಗಿದೆ ಎಂದರು.
ನಾವು ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ನೀರು ಬಿಡಬೇಕು ಅಂತ ಹೇಳ್ತಿದೆ. ಮತ್ತೊಂದು ಕಡೆ ದಿನಾಂಕ ಮುಂದೂಡುತ್ತಿದೆ. ಸುಪ್ರೀಂ ಕೋರ್ಟ್ ತೀರ್ಮಾನ ಅನ್ವಯಿಸಿ ತೀರ್ಮಾನಕ್ಕೆ ಬರಬೇಕು. ನಮ್ಮ ಸರ್ಕಾರ ಸಾಕಷ್ಟು ಪ್ರಯತ್ನದಲ್ಲಿದೆ ಎಂದು ತಿಳಿಸಿದರು.
ರಾಜಕಾರಣ ಬೇರಿಸೋದು ಬೇಡ ಅಂತ ದೇವೇಗೌಡರು ಸಹ ಹೇಳಿದ್ದಾರೆ. ಇಂತಹ ಪರಿಸ್ಥಿತಿಯನ್ನ ಸಾಕಷ್ಟು ಬಾರಿ ಎದುರಿಸಿದ್ದೇವೆ. ಜೆಡಿಎಸ್ ಕಾಂಗ್ರೆಸ್ ಬಿಜೆಪಿ ರೈತರು ಒಟ್ಟಿಗೆ ಸೇರಿ ನಮ್ಮ ರಾಜ್ಯದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ. ಪ್ರಾಮಾಣಿಕ ಹೆಜ್ಜೆ ಹಾಕ್ತಿದ್ದೇವೆ. ಇನ್ನೆರಡೂ ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟರೆ, ನಾವು ಪ್ರಧಾನಮಂತ್ರಿ ಬಳಿ ಜೊತೆ ಸಿಎಂ ಹೋಗ್ತಾರೆ ಎಂದು ತಿಳಿಸಿದರು.