Saturday, April 19, 2025
Google search engine

Homeರಾಜಕೀಯಮುಂಬರುವ ದಕ್ಷಿಣ ಶಿಕ್ಷಕರ ಕ್ಷೇತ್ರ , ಪಾರ್ಲಿಮೆಂಟ್ ಚುನಾವಣಾ ಪೂರ್ವ ಭಾವಿ ಸಭೆ

ಮುಂಬರುವ ದಕ್ಷಿಣ ಶಿಕ್ಷಕರ ಕ್ಷೇತ್ರ , ಪಾರ್ಲಿಮೆಂಟ್ ಚುನಾವಣಾ ಪೂರ್ವ ಭಾವಿ ಸಭೆ

ಮೈಸೂರು:ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಪ್ರಮುಖ ಕಾರ್ಯಕರ್ತರ ಹಾಗೂ ಶಿಕ್ಷಕ ಸಂಘಟನೆಯ ಸಭೆಯನ್ನು ಪಕ್ಷದ ಕಛೇರಿ ಸಚ್ಚಿನ್ ರಾಜೇಂದ್ರ ದಲ್ಲಿ ನಡೆಸಲಾಯಿತು. ಈ ಸಭೆಯನ್ನು ಪಕ್ಷದ ಹಿರಿಯರು ಹಾಗೂ ಈ ಚುನಾವಣಾ ಉಸ್ತುವಾರಿ ಗಳಾದ ಸನ್ಮಾನ್ಯ ಈಶ್ವರಪ್ಪನವರ ನೇತೃತ್ವದಲ್ಲಿ ನಡೆಯಿತು . ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪನವರು ಮುಂಬರುವ ಲೋಕಸಭೆ ಚುನಾವಣೆ ಮತ್ತೊಮ್ಮೆ ಮೋದಿಯವರು ಪ್ರಧಾನ ಮಂತ್ರಿ ಆಗುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು, ಈ ಚುನಾವಣೆ ನಿಮಿತ್ತ ಯುವ ಜನತೆಯನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು.

ಇದಕ್ಕೆ ಸಂಬಂಧಿಸಿದಂತೆ ಪ್ರತಿ ಮಂಡಲಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ಮಾಡಿ ಆ ಮೂಲಕ ಯುವಕರನ್ನು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ನಾಲ್ಕು ಜಿಲ್ಲೆಗಳಲ್ಲಿ ಗೆಲ್ಲುವ ರೀತಿ ಯೋಜನೆ ರೂಪಿಸಬೇಕು ಎಂದು ಹೇಳಿದರು ಹಾಗೂ ಪ್ರಸ್ತುತ ಕೊಡಗು ಮೈಸೂರು ಸಂಸದರಾದ ಪ್ರತಾಪ್ ಸಿಂಹರವರು ಕೊಡಗು ಮತ್ತು ಮೈಸೂರಿಗೆ ತಂದಿರುವ ಅನೇಕ ಜನಪರ ಯೋಜನೆಗಳು ಮುಂಬರುವ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿದ್ದು ಅಧಿಕ ಮತಗಳಲ್ಲಿ ಗೆಲ್ಲಿಸುವಂತೆ ತಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

ಇದರ ಜೊತೆಗೆ 2024ರ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಪೂರ್ವ ಭಾವಿ ಸಭೆಯನ್ನು ನಡೆಸಿ 4 ಜಿಲ್ಲೆಗಳ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳೊಡನೆ ಸಮಾಲೋಚನೆಯನ್ನು ನಡೆಸಿ ಇದೇ ತಿಂಗಳು 30 ರಿಂದ ಪಕ್ಷದಿಂದ ಶಿಕ್ಷಕರ ಮತದಾರರನ್ನು ನೋಂದಣಿ ಮಾಡಿಸುವ ಕಾರ್ಯವನ್ನು 4 ಜಿಲ್ಲೆಗಳಲ್ಲಿ ಅಂದರೆ ಹಾಸನ ಮಂಡ್ಯ ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿ ಪ್ರಾರಂಭ ಮಾಡುವಂತೆ ಸೂಚಿಸಿದರು ಈ ಬಾರಿ ಶಿಕ್ಷಕರ ಒಲವು ಭಾರತೀಯ ಜನತಾ ಪಾರ್ಟಿ ಮೇಲೆ ಇದ್ದು ನಮ್ಮ ಎಲ್ಲಾ ಕಾರ್ಯಕರ್ತರು ನೊಂದಣಿ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಮುಖಾಂತರ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಗೆಲ್ಲುವಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಈ ಸಭೆಯಲ್ಲಿ ವಿಭಾಗ ಪ್ರಭಾರಿಗಳಾದ ಮೈ ವಿ ರವಿಶಂಕರ್, ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ ,ಸಂಸದರಾದ ಶ್ರೀಯುತ ಪ್ರತಾಪ್ ಸಿಂಹ, ಶಾಸಕರಾದ ಶ್ರೀವತ್ಸ, ಜಿಲ್ಲಾ ಅಧ್ಯಕ್ಷರಾದ ಮಂಗಳ ಸೋಮಶೇಖರ್ ,ಮಾಜಿ ಶಾಸಕರಾದ ಕೊಳ್ಳೇಗಾಲ ಮಹೇಶ್ ರವರು, ಗುಂಡ್ಲುಪೇಟೆ ನಿರಂಜನ್ ರವರು, ಚಾಮರಾಜ ಕ್ಷೇತ್ರದ ನಾಗೇಂದ್ರ , ನಂಜನಗೂಡು ಕ್ಷೇತ್ರದ ಹರ್ಷವರ್ಧನ್ , ಹಾಸನದ ಪ್ರೀತಮ್ ಗೌಡ ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ತುಳಸಿ ಮುನಿರಾಜು ಗೌಡ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular