ನಂಜನಗೂಡು: ಇಂದು ನಂಜನಗೂಡು ತಾಲ್ಲೂಕಿನ ಹೆಡಿಯಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಡಿಯಲಾ, ಪಾರ್ವತಿಪುರ, ವೆಂಕಟಚಲಪುರ ವಡೆಯನಪುರ, ಹಾದನೂರು ವಡೆಯನಪುರ, ಗ್ರಾಮಗಳಲ್ಲಿ ‘ಜನಸಂಪರ್ಕ ಸಭೆ’ಯನ್ನು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಭಾಗವಹಿಸಿ, ಗ್ರಾಮಗಳ ಸಮಸ್ಯೆ, ಹಾಗೂ ಸಾರ್ವಜನಿಕರ ಹಲವಾರು ಸಮಸ್ಯೆಗಳ ಕುರಿತಾಗಿ ಚರ್ಚಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ತಹಸೀಲ್ದಾರ್ ಶಿವಕುಮಾರ್ , EO ರಾಜೇಶ್ , ಗ್ರಾಂ. ಪಂ ಅಧ್ಯಕ್ಷರಾದ ಮಹಾದೇವಮ್ಮ , PDO ನಾಗರಾಜ್ , ಗ್ರಾಂ. ಪಂ ಉಪಾಧ್ಯಕ್ಷರಾದ ದಿನೇಶ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ , ಕೆ. ಮಾರುತಿ , ನಾಗೇಶ್ ರಾಜ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು.