ಪಿರಿಯಾಪಟ್ಟಣ: ಭುವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23 ಸಾಲಿನಲ್ಲಿ ನಿವ್ವಳ 10.92 ಲಕ್ಷ ಆದಾಯ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಬಿ.ಎನ್ ಹರೀಶ್ ತಿಳಿಸಿದರು.
ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ನಡೆದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಅಭಿವೃದ್ಧಿ ಶೇರುದಾರ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದಿಂದ ಮಾತ್ರ ಸಾಧ್ಯ, ಸಾಲ ಸಕಾಲದಲ್ಲಿ ಮರು ಪಾವತಿಯಾಗುತ್ತಿರುವುದರಿಂದ ಸಂಘ ಹೆಚ್ಚು ಅಭಿವೃದ್ಧಿಯಾಗುತ್ತಿದೆ, ವಾರ್ಷಿಕ ಮಹಾಸಭೆ ಎಂದರೆ ಸಂಘದಲ್ಲಿ ಹಬ್ಬ ಇದ್ದಂತೆ ಸಂಘದಲ್ಲಿರುವ ಆಗುಹೋಗುಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಲು ಇಲ್ಲಿ ಕಾಲಾವಕಾಶವಿದೆ ಎಂದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಪ್ರತಿನಿಧಿ ಶಿವಕುಮಾರ್ ಅವರು ಮಾತನಾಡಿ ಸಹಕಾರ ಸಂಘಕ್ಕೆ ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವಂತೆ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಪಿ ಸತೀಶ್ ಮಾತನಾಡಿ ಮುಂಬರುವ ದಿನಗಳಲ್ಲಿ ಸಹಕಾರ ಸಂಘಕ್ಕೆ ಹೆಚ್ಚು ಆರ್ಥಿಕ ಪ್ರಗತಿ ಗುರಿ ಹೊಂದಿದ್ದು ಸದಸ್ಯರು ಸಹಕರಿಸಬೇಕು ಎಂದು ತಿಳಿಸಿ ವಾರ್ಷಿಕ ವರದಿ ಮಂಡಿಸಿದರು. ವಾರ್ಷಿಕ ಮಹಾಸಭೆಯಲ್ಲಿ ರೈತರಿಗೆ ಬೇಕಾದ ಸಾಲದ ಸೌಲಭ್ಯ ಅಲೆದಾಡಿಸದೆ ಕೊಡಬೇಕು ಸಾಲ ಮರುಪಾವತಿ ಮಾಡುವ ವಿಚಾರದಲ್ಲಿ ಕಂತುಗಳ ವ್ಯವಸ್ಥೆ ಮಾಡಿಸಬೇಕು ಸಂಘದ ಜಾಗದಲ್ಲಿ ವಾಣಿಜ್ಯ ಮಳಿಗೆ ಮಾಡಿ ಸಂಘದ ಆದಾಯದ ಬಗ್ಗೆ ಗಮನಹರಿಸಬೇಕು ಸ್ವಚ್ಛತೆಗೆ ಆದ್ಯತೆ ನೀಡಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು, ಯಜಮಾನರಾದ ರಾಜೇಗೌಡ, ಸೋಮೇಗೌಡ, ರಾಮಶೆಟ್ಟಿ, ನಾಗೇಂದ್ರ, ರಾಜಗೋಪಾಲ್, ಜಯಣ್ಣ, ಬಿ.ಟಿ ಸಣ್ಣಸ್ವಾಮಿಗೌಡ, ಕುಮಾರ್, ಮೂರ್ತಿ ಪುಟ್ಟರಾಜು, ಸಂಘದ ಉಪಾಧ್ಯಕ್ಷರಾದ ವೆಂಕಟರಮಣಶೆಟ್ಟಿ, ನಿರ್ದೇಶಕರಾದ ಮಲ್ಲೇಶ್, ಬಿ.ವಿ ಗಿರೀಶ್, ಜಯಣ್ಣ, ಮಹಾದೇವ, ಲೋಹಿತ್, ಲಕ್ಷ್ಮಿ, ಗೌರಮ್ಮ, ವಿಜೇಂದ್ರ, ಬೋರಪ್ಪ, ಬೇಲೂರಯ್ಯ, ಸಿಬ್ಬಂದಿ ರಾಜಶೇಖರ್, ಸಂತೋಷ್ ಮತ್ತು ಭುವನಹಳ್ಳಿ ಸಾಲುಕೊಪ್ಪಲು ಜೋಗನಹಳ್ಳಿ, ಕೊಣಸೂರು ಗ್ರಾಮದ ಶೇರುದಾರ ಸದಸ್ಯರು ಇದ್ದರು.