Saturday, April 19, 2025
Google search engine

Homeರಾಜ್ಯಸುದ್ದಿಜಾಲಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸುವಲ್ಲಿ ಯಶಸ್ವಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸುವಲ್ಲಿ ಯಶಸ್ವಿ

ಪಿರಿಯಾಪಟ್ಟಣ: ಪಟ್ಟಣದಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಸಂಘದ ಆವರಣದಲ್ಲಿ ಒಟ್ಟು 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 11 ಕಾಂಗ್ರೆಸ್ ಬೆಂಬಲಿತರು 1 ಸ್ಥಾನದಲ್ಲಿ ಜಯಗಳಿಸಿದರು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣ ಜಯಗಳಿಸಿದರೆ ಸಾಲಗಾರರ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಹೆಚ್.ಬಿ ಸುರೇಶ್, ಹೆಚ್.ಬಿ ರಮೇಶ್, ರಾಮೇಗೌಡ, ಸೈಯದ್ ಜಮೀಲ್, ಬಿ.ಆರ್ ಸತೀಶ್ ಕುಮಾರ್, ಪಿ.ಕೆ ಕುಮಾರ್, ವಿ.ಆರ್ ವೆಂಕಟೇಶ್, ಗೀತಾ, ಎಸ್.ಜಿ ನಳಿನಿ, ಶೋಭಾ, ಕರಿನಾಯಕ ಜಯಗಳಿಸಿದರು.
ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಬಿರುಸಿನ ಸ್ಪರ್ಧೆ ನಡೆದಿದ್ದಾದರೂ ಕೊನೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸುವಲ್ಲಿ ಯಶಸ್ವಿಯಾಗಿ ಅಧಿಕಾರಕ್ಕೆರುವಲ್ಲಿ ಸಫಲರಾದರು.
ಫಲಿತಾಂಶ ಬಳಿಕ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಪಕ್ಷದ ನಾಯಕರ ಪರ ಜೈಕಾರ ಕೂಗಿ ಸಂಭ್ರಮ ಆಚರಿಸಿದರು. ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದ ಎಲ್ಲಾ ಶೇರುದಾರ ಸದಸ್ಯರಿಗೆ ಧನ್ಯವಾದ ತಿಳಿಸಿ ಅಧಿಕಾರವಧಿಯಲ್ಲಿ ಸಹಕಾರ ಸಂಘದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದಾಗಿ ನೂತನವಾಗಿ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳು ತಿಳಿಸಿದರು.ಈ ಸಂದರ್ಭ ಜೆಡಿಎಸ್ ಮುಖಂಡರಾದ ಎಸ್.ರಾಮು, ಮಂಜುನಾಥ್ ಸಿಂಗ್, ರಾಮಚಂದ್ರು, ಬಿ.ಶಿವಣ್ಣ, ಗೋಪಾಲ್, ಪಾರೆಕೊಪ್ಪಲು ಚಂದ್ರು, ಶಿವರಾಜು, ಮತ್ತಿತರಿದ್ದರು.


RELATED ARTICLES
- Advertisment -
Google search engine

Most Popular