ಮೈಸೂರು : ಮೈಸೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ೨೭ ಹಾಸ್ಟೆಲ್‌ಗಳಿಗೆ ಸ್ವಂತಕಟ್ಟಡ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳೊ0ದಿಗೆ ಚರ್ಚೆಮಾಡಿಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತುಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ಎಸ್. ತಂಗಡಗಿ ತಿಳಿಸಿದರು.
ಮೈಸೂರಿನ ಶ್ರೀರಾಂಪುರದ ಭವ್ಯಭಾರತ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ಡಿ. ದೇವರಾಜಅರಸು ವೈದ್ಯಕೀಯ ಮತ್ತುಇಂಜಿನಿಯರಿ0ಗ್ ಬಾಲಕಿಯರ ವಿದ್ಯಾರ್ಥಿನಿಲಯದಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದಅವರು ಮೈಸೂರಿಗೆ ವಿದ್ಯಾಭ್ಯಾಸ ಮಾಡಲುರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಿದ್ದು, ಹಾಸ್ಟೆಲ್‌ಗಳಿಗೆ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಸ್ವಂತಕಟ್ಟಡ ಕಟ್ಟಲುಕ್ರಮ ಕೈಗೊಳ್ಳುತ್ತೇವೆ. ಗುತ್ತಿಗೆದಾರರುಗುಣಮಟ್ಟದಕಾಮಗಾರಿ ಮಾಡಬೇಕು. ನಿಗದಿತ ಸಮಯದಲ್ಲಿಕಟ್ಟಡದಕಾಮಗಾರಿಯನ್ನು ಮುಗಿಸಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಉಪಮಹಾಪೌರರಾದ ಡಿ. ಜಿ. ರೂಪ, ಜಿಲ್ಲಾ ಬಿ.ಸಿ.ಎಂ. ಅಧಿಕಾರಿರಾಘವೇಂದ್ರ, ನಗರ ಪಾಲಿಕೆ ಸದಸ್ಯೆಗೀತಾಯೋಗನಂದತಾಲ್ಲೂಕುಕಲ್ಯಾಣಾಧಿಕಾರಿಎನ್. ವಿಶ್ವನಾಥ್ ಐಇಇ ಸೋಮಶೇಖರ್, ಎಇಇ ಕೃಷ್ಣಪ್ಪ, ಎಇ ಅಶ್ವಿನಿ, ಗುತ್ತಿಗೆದಾರರಾದ ಜಿ.ಬಿ.ಆರ. ಚಂದ್ರಶೇಖರ್, ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಸ್ವರ್ಣಲತಾ, ಚಂದ್ರಕಲಾ, ಶಶಿಕಲಾ, ಸುಚೇಂದ್ರಕುಮಾರ್, ಹರೀಶ್, ರಾಜಣ್ಣ ಹಾಗೂ ನಿಲಯಪಾಲಕರು ಹಾಜರಿದ್ದರು.