ಹೊಸೂರು: ಕೆ.ಆರ್.ನಗರ ತೋಟಗಾರಿಕೆ ಇಲಾಖಾ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ವಿವಿಧ ಘಟಕಗಳಡಿ ಸಹಾಯಧನ ಸೌಲಭ್ಯವಿದ್ದು, ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ರೈತರಲ್ಲಿ ತಾಲೂಕು ಹಿರಿಯ ತೋಟಗಾರಿಕೆ ನಿರ್ದೇಶಕಿ ಟಿ.ಎಸ್.ಭಾರತಿ ಕೋರಿದ್ದಾರೆ
ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ತಾಳೆ ಬೆಳೆಯಲು ಘಟಕಗಳಡಿ ಸಹಾಯಧನ ಸೌಲಭ್ಯವಿರುತ್ತದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಪ್ರತ್ಯೇಕ ಅನುದಾನ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್(MIDH): ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಇತರೆ ವರ್ಗದ ರೈತರಿಗೆ ನೀರು,ಸಂಗ್ರಹಣಾ ಘಟಕ ನಿರ್ಮಿಸಿದ(ಕೃಷಿ ಹೊಂಡ) ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರ ಜೊತಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY) ಯಡಿ ರೈತರು ಅನುಮೋದಿತ ಕಂಪನಿಗಳಿಂದ ವಿವಿಧ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಿರುವ ಸಾಮಾನ್ಯ ವರ್ಗದ ರೈತರಿಗೆ ಶೇ.75% ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90% ಸಹಾಯಧನ ಪಡೆದು ಕೊಳ್ಳಬಹುದು ಎಂದು ತಿಳಿಸಿದ್ದಾರೆ
ಈ ಸೌಲಭ್ಯ ಪಡೆಯಲು ಚುಂಚನಕಟ್ಟೆ ಮತ್ತು ಹೊಸ ಅಗ್ರಹಾರ ಹೋಬಳಿ ರೈತರು ಹರೀಶ್ ಮೊಬೈಲ್ ಸಂಖ್ಯೆ 9611247487, ಮಿರ್ಲೆ ಹೋಬಳಿ ರೈತರು ಶ್ರವಣ ಕುಮಾರ್ ಬಿ ವಗ್ಗನ್ನವರ್ ಮೊಬೈಲ್ ಸಂಖ್ಯೆ 9164370586, ಕಸಬಾ ಹೋಬಳಿಯ ರೈತರು ರಾಜೇಶ್ ಮೊಬೈಲ್ ಸಂಖ್ಯೆ
7975569760 , ಹೆಬ್ಬಾಳು ಮತ್ತು ಸಾಲಿಗ್ರಾಮ ಹೋಬಳಿಯ ರೈತರು ಎಚ್.ಎಸ್.ರಾಘವೇಂದ್ರ ಮೊಬೈಲ್ ಸಂಖ್ಯೆ 9900370047 ಸಂಪರ್ಕಿಸಿ ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.