ತುಮಕೂರು :ತಂಗುದಾಣ ನಿರ್ಮಾಣ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು ಶಿಕ್ಷಕ ರಾಜಶೇಖರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಗಂಡನಾದ ಮಂಜುನಾಥ್ ಅವರಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ತಂಗುದಾಣ ನಿರ್ಮಾಣದಿಂದ ಮನೆಗೆ ಅಡ್ಡಿಯಾಗುವ ಕಾರಣ ನೀಡಿ ಶಿಕ್ಷಕ ರಾಜಶೇಖರ್ ತಂಗುದಾಣ ನಿರ್ಮಾಣಕ್ಕೆ ಜಾಗ ಗುರುತಿಗೆ ಮುಂದಾಗಿದ್ದ ಮಂಜುನಾಥ್ ಮೇಲೆ ವಿರೋಧ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ. ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ಮಂಜುನಾಥ್ ರವರಿಗೆ ರಾಜಶೇಖರ್ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಗ್ರಾಮಸ್ಥರ ಮಧ್ಯಪ್ರವೇಶದಿಂದ ಗಲಾಟೆ ಶಮನಕ್ಕೆ ಬಂದಿದೆ.