Sunday, April 20, 2025
Google search engine

Homeರಾಜ್ಯಭಾರತ ಎಂದು ಉಚ್ಛರಿಸಲು ಬಾರದ ಇಂಗ್ಲೀಷರು ಕರೆದ ಇಂಡಿಯಾ ಹೆಸರಿಗೆ ಮಹತ್ವ ಇಲ್ಲ: ಆರಗ ಜ್ಞಾನೇಂದ್ರ

ಭಾರತ ಎಂದು ಉಚ್ಛರಿಸಲು ಬಾರದ ಇಂಗ್ಲೀಷರು ಕರೆದ ಇಂಡಿಯಾ ಹೆಸರಿಗೆ ಮಹತ್ವ ಇಲ್ಲ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಇಂಡಿಯಾ ಎಂಬುದು ಭಾರತ ಎಂದು ಉಚ್ಚಾರ ಮಾಡಲು ಬರದೇ ಇರುವ ಇಂಗ್ಲಿಷರು ಕರೆದಿರುವ ಹೆಸರು. ಅದಕ್ಕೆ ಮಹತ್ವ ಇಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು

ದೇಶದ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿರುವ ಅವರು ಇಂಡಿಯಾ ಎಂಬ ಹೆಸರಿನ ಬಗ್ಗೆ ಬಾರಿ ವಿವಾದ ಹಾಗೂ ಚರ್ಚೆಯಾಗುತ್ತಿದೆ. ಇಂಡಿಯಾ ಎನ್ನುವ ಹೆಸರಿಗೆ ಯಾವ ಹಿನ್ನಲೆಯೂ ಇಲ್ಲ. ಇಂಡಸ್ ವ್ಯಾಲ್ಯೂ ಇರುವ ಕಾರಣಕ್ಕೆ ಇಂಡಿಯಾ ಎಂಬ ಹೆಸರು ಬಂದಿದೆ ಎಂದರು.

ಇಂಗ್ಲಿಷರ ಹಾಗೂ ಮೊಘಲರ ಕಾಲದಲ್ಲಿ ಪರಿವರ್ತನೆ ಆಗಿತ್ತೋ ಅದನ್ನು ಸರಿಪಡಿಸುವುದಕ್ಕೆ ಹಾಗೂ ಸಾಂಸ್ಕೃತಿಕ ಭಾರತ ಎದ್ದೇಳಲು ಇಂದು ಚರ್ಚೆಯಾಗುತ್ತಿದೆ. ಈಗಾಗಲೇ ಹಲವು ಊರಿನ ಹೆಸರು ಬದಲಾವಣೆ ಆಗಿದೆ. ಮದ್ರಾಸ್ ಈಗ ಚನ್ನೈ, ಬೆಂಗಳೂರ್ ಹೋಗಿ ಬೆಂಗಳೂರು, ಕೂರ್ಗ್ ಹೋಗಿ ಕೊಡಗು ಆಗಿದೆ, ಕಾರಣ ಹೆಸರಿನಲ್ಲಿ ಭಾವನಾತ್ಮಕತೆ ಇದೆ ಎಂದರು.

ನಾವು ಭಾರತ್ ಮಾತ ಕಿ ಜೈ ಎನ್ನುತ್ತೇವೆ ಹೊರತು ಇಂಡಿಯಾ ಮಾತ ಕಿ ಜೈ ಎನ್ನುವುದಿಲ್ಲ. ಹಾಗಾಗಿ ಸರ್ಕಾರ ಹೆಸರು ಬದಲಾವಣೆ ಮಾಡುವುದು ಖಂಡಿತ ಒಳ್ಳೆಯದು. ಈ ದೇಶ ಪರದೇಶಿ ಅಲ್ಲ, ಧರ್ಮಛತ್ರ ಅಲ್ಲ. ನಮ್ಮ ಪರಂಪರೆಯಲ್ಲಿ ಬಂದಿರುವ ಹೆಸರು. ಭಾರತ ಎಂಬ ಹೆಸರನ್ನು ಇಟ್ಟರೆ ದೇಶದ ವಿಷಯದಲ್ಲಿ ಭಾವನೆಗಳು ಬೆಳೆಯುತ್ತವೆ ಎಂದರು.

RELATED ARTICLES
- Advertisment -
Google search engine

Most Popular