ಕೃಷ್ಣರಾಜನಗರ: ಪಟ್ಟಣದ ವಾಸವಿ ಹಾನ್‌ನಲ್ಲಿ ಆಲ್ಫಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜನೆ ಮಾಡಲಾಗಿದ್ದ ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ತಹಸೀಲ್ದಾರ್ ಪೂರ್ಣಿಮಾ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್, ಪೂರ್ಣಿಮಾ ಆಲ್ಫಾದ್ವಿಪೂರ್ವ ಕಾಲೇಜು ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸನ್ನು ಮೂಡಿಸುತ್ತದೆ ಹಾಗೂ ಅವರಿಗೆ ತಮ್ಮ ಸ್ನೇಹಿತರ ಹಾಗೂ ಕಾಲೇಜಿನ ಪರಿಚಯ ಮಾಡಿಕೊಡುವುದು ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದು ಅವರಿಗೆ ಬಾರಿ ಅನುಕೂಲ ಉಂಟು ಮಾಡುತ್ತದೆ ಎಂದರು.
ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಓದುವಿನ ಕಡೆ ಹೆಚ್ಚಿನ ಗಮನಹರಿಸಿ ಕ್ಷೇತ್ರಕ್ಕೆ ತಾಲೂಕಿಗೆ ಕೀರ್ತಿ ತರುವ ಕೆಲಸವನ್ನ ಮಾಡಬೇಕು ಮೊಬೈಲ್ ಗಳಲ್ಲಿ ಈಗಿನ ಕಾಲದ ಮಕ್ಕಳು ಹೆಚ್ಚು ಕಾಲ ಕಳೆಯುತ್ತಿದ್ದಾರೆ ನಮ್ಮ ಕಾಲದಲ್ಲಿ ಓದಿನಲ್ಲಿ ಹೆಚ್ಚು ಕಾಲಕಳೆಯುತ್ತಿದ್ದೆವು. ಈಗಿನ ಕಾಲದಲ್ಲಿ ಎಲ್ಲಾ ಮೊಬೈಲ್ ಮಯಾವಾಗಿದೆ ಎಂದು ಮಕ್ಕಳಿಗೆ ಶಿಕ್ಷಣದ ಕಡೆ ಹೇಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.