ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ದಲ್ಲಿ ಭಾಗಿಯಾಗಲು ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ತೂಕ ಪರಿಶೀಲನೆಯನ್ನು ಇಂದು ನಡೆಸಲಾಗಿದೆ.
ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆದಿದೆ.
ಅಭಿಮನ್ಯು – 5,160 ಕೆ ಜಿ ತೂಕ
ವಿಜಯ – 2,830 ಕೆ ಜಿ
ಭೀಮ – 4,370 ಕೆ ಜಿ
ವರಲಕ್ಷ್ಮಿ – 3,020 ಕೆ ಜಿ
ಮಹೇಂದ್ರ – 4,530 ಕೆ ಜಿ
ಧನಂಜಯ – 4,940 ಕೆ ಜಿ
ಕಂಜನ್ – 4,240 ಕೆ ಜಿ
ಗೋಪಿ – 5,080 ಕೆ ಜಿ ತೂಕ.
ತೂಕ ಮಾಡಿದ ಆನೆಗಳ ಪೈಕಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವೇ ಅತ್ಯಂತ ಹೆಚ್ಚು ಬಲಶಾಲಿಯಾಗಿದ್ದಾನೆ.
