ಮಂಡ್ಯ: ಮಂಡ್ಯದ ಆಸ್ಪತ್ರೆ ತಮಿಳು ಕಾಲೋನಿ ಜನರಿಂದ ಕೊಳಚೆ ನಿರ್ಮೂಲನಾ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದಾರೆ.
ಆಸ್ಪತ್ರೆ ಸ್ಲಂ ನಿಂದ ನಗರದ ಕೆರೆ ಅಂಗಳಕ್ಕೆ ತಮಿಳು ಕಾಲೋನಿಯನ್ನು ಸ್ಥಳಾಂತರಿಸಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸರ್ವೆಗೆ ಆಗಮಿಸಿದ್ದರು
ಸ್ಥಳಾಂತರವಾಗಲು ಸ್ಲಂ ನಿವಾಸಿಗಳ ವಿರೋಧ ವ್ಯಕ್ತಪಡಿಸಿ, ಸರ್ವೆಗೆ ಬಂದ ತಡೆದಿದ್ದಾರೆ. ಪೊಲೀಸರ ಸರ್ಪಗಾವಲು ಜೊತೆ ಬಂದರು ಅಧಿಕಾರಿಗಳಿಗೆ ಸರ್ವೆ ಮಾಡಲಾಗಿಲ್ಲ. ಪರಿಣಾಮ ತಮಿಳು ಕಾಲೋನಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.

ತಹಶೀಲ್ದಾರ್ ಶಿವಕುಮಾರ್ ಬೀರದರ್ ಗೆ ಜನರು ತರಾಟೆಗೆ ತೆಗೆದುಕೊಂಡಿದ್ದು, ಸ್ಥಳಕ್ಕೆ ಎಡಿಸಿ ನಾಗರಾಜು ಆಗಮಿಸಿದ್ದು, ಸ್ಲಂ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಹಕರಿಸಿ, ಏಕಾಏಕಿ ಸ್ಥಳಾಂತರ ಮಾಡ್ತಿಲ್ಲ. ಸ್ಲಂ ಸರ್ವೆ ಮಾಡ್ತಿರೋದು ನೀವು ಭಯ ಪಡುವ ಅಗತ್ಯವಿಲ್ಲ. ನಿಮಗೆ ಸರಿಯಾದ ವ್ಯವಸ್ಥೆ ಮಾಡಿ ಬಳಿಕ ಸ್ಥಳಾಂತರ ಮಾಡಲಾಗುವುದು. ನೀವು ಸರ್ವೆಗೆ ಅಡ್ಡಿ ಪಡಿಸಬೇಡಿ, ನಿಮಗೆ ಆಶ್ರಯ ಕೊಡುವ ಜವಾಬ್ದಾರಿ ನಮ್ಮದು ಎಂದು ಮನವಿ ಮಾಡಿದ್ದಾರೆ.
ಆದರೆ ಸ್ಲಂ ನಿವಾಸಿಗಳು ಸರ್ವೆ ಮಾಡಲು ಅವಕಾಶ ಕೊಡದೆ ಸ್ಥಳದಲ್ಲೇ ಕುಳಿತಿದ್ದಾರೆ. ನಮ್ಮ ಜಾಗದಲ್ಲಿ ನಾವು ಇರ್ತೇವೆ. ಸ್ಥಳಾಂತರ ಮಾಡಬೇಡಿ ಎಂದು ಎಡಿಸಿಗೆ ಸ್ಲಂ ನಿವಾಸಿಗಳು ಮನವಿ ಮಾಡಿದ್ದಾರೆ.
ನಮಗೆ ನಿರ್ಮಿಸಿರುವ ನಿವೇಶನಗಳು ಸರಿ ಇಲ್ಲ. ನಾವು ಸುಮಾರು ವರ್ಷಗಳಿಂದ ಇಲ್ಲೆ ವಾಸ ಇದ್ದೇವೆ. ನಮ್ಮ ಜಾಗ ಬಿಟ್ಟು ನಾವು ಬರಲ್ಲ ತೆರವಿಗೆ ಅವಕಾಶ ಕೊಡಲ್ಲ ಎಂದು ನಿವಾಸಿಗಳು ಪಟ್ಟು ಹಿಡಿದಿದ್ದಾರೆ.